ಭಾರತ, ಮಾರ್ಚ್ 20 -- ಬೆಂಗಳೂರು ಮೂಲದ ನಾಯಿಪ್ರೇಮಿಯೊಬ್ಬರು ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರು ಖರೀದಿಸಿದ ನಾಯಿ, ವಿಶ್ವದಲ್ಲೇ ಅತ್ಯಂತ ದುಬಾರಿ ಆಗಿರುವ ನಾಯಿಯೊಂದನ್ನು ಇವರು ಖರೀದಿ ಮಾಡಿದ್ದಾರೆ. ದುಬಾರಿ ಅಂದ್ರೆ ಸಾಧಾರಣವಲ್ಲ, ಈ ನಾಯಿಯ ಬೆಲೆ ಬರೋಬ್ಬರಿ 50 ಕೋಟಿ ಎಂದರೆ ಯಾರಾದರು ಒಮ್ಮೆ ದಂಗಾಗುತ್ತಾರೆ. ಆದರೆ ಈ ನಾಯಿ ಈಗ ಬೆಂಗಳೂರಿನ ಶ್ವಾನಪ್ರೇಮಿಯ ಮನೆ ಸೇರಿರುವುದು ಸುಳ್ಳಲ್ಲ.

ಕ್ಯಾಡಬಾಂಬ್ ಒಕಾಮಿ ಎಂಬ ಅಪರೂಪದ 'ತೋಳನಾಯಿ' ಗಾಗಿ 4.4 ಮಿಲಿಯನ್ (ಸುಮಾರು 50 ಕೋಟಿ ರೂ.) ಖರ್ಚು ಮಾಡಿದ್ದಾರೆ ಬೆಂಗಳೂರಿನ ಎಸ್‌. ಸತೀಶ್‌. ಈ ನಾಯಿ ಕಾಡು ತೋಳ ಮತ್ತು ಕಕೇಶಿಯನ್ ಶೆಫರ್ಡ್ ನಡುವಿನ ಮಿಶ್ರಣವಾಗಿದ್ದು, ಇದನ್ನು ವಿಶ್ವದ ಅತ್ಯಂತ ದುಬಾರಿ ತೋಳನಾಯಿ ಎಂದು ಹೇಳಲಾಗುತ್ತದೆ.

51 ವರ್ಷದ ಎಸ್ ಸತೀಶ್ ಫೆಬ್ರವರಿಯಲ್ಲಿ ಬ್ರೋಕರ್ ಮೂಲಕ ಈ ಪ್ರಾಣಿಯನ್ನು ಖರೀದಿಸಿದ್ದಾರೆ ಎಂದು ದಿ ಸನ್ ವರದಿ ಮಾಡಿದೆ. ವಿಶ್ವದ ಅಪರೂಪದ ನಾಯಿ ಎಂದು ಹೇಳಲಾಗುವ ಒಕಾಮಿಯ ವಯಸ್ಸು ಈಗ ಕೇವಲ ಎಂಟು ತಿಂಗಳು. ಅದು 75 ಕೆಜಿ ...