ಭಾರತ, ಮಾರ್ಚ್ 13 -- ಬಹುಮುಖ ಪ್ರತಿಭೆ ಮತ್ತು ಕೌಶಲ್ಯಯುತ ಫೀಲ್ಡಿಂಗ್ಗೆ ಹೆಸರುವಾಸಿಯಾಗಿದ್ದ ಭಾರತದ ಮಾಜಿ ಆಲ್ರೌಂಡರ್ ಸೈಯದ್ ಅಬಿದ್ ಅಲಿ ಅವರು ದೀರ್ಘಕಾಲದ ಅನಾರೋಗ್ಯದ ಕಾರಣ ಬುಧವಾರ (ಮಾರ್ಚ್ 12) ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಟೀಮ್ ಇಂಡಿಯಾ ಪರ ಒಟ್ಟು 34 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು, ಎಂಎಕೆ ಪಟೌಡಿ, ಎಂಎಲ್ ಜೈಸಿಂಹ, ಅಬ್ಬಾಸ್ ಅಲಿ ಬೇಗ್ ಅವರೊಂದಿಗೆ ಹೈದರಾಬಾದ್ನ ಪ್ರಸಿದ್ಧ ಕ್ರಿಕೆಟಿಗರ ಗುಂಪಿನ ಭಾಗವಾಗಿದ್ದರು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಿಧನರಾಗಿದ್ದಾರೆ. ಮಾಜಿ ಕ್ರಿಕೆಟಿಗನ ನಿಧನದ ಸುದ್ದಿಯನ್ನು ಉತ್ತರ ಅಮೆರಿಕನ್ ಕ್ರಿಕೆಟ್ ಲೀಗ್ ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದೆ.
1967ರ ಡಿಸೆಂಬರ್ನ ಅಡಿಲೇಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅಬಿದ್ ಅಲಿ, ಮೊದಲ ಇನ್ನಿಂಗ್ಸ್ನಲ್ಲಿ 55 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಅದೇ ಸರಣಿಯ ಸಿಡ್ನಿ ಟೆಸ್ಟ್ನಲ್ಲಿ 78 ಮತ್ತು 81 ರನ್ ಗಳಿಸುವ ಮೂಲಕ ಬ್ಯಾಟಿಂಗ್ಸ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.