ಭಾರತ, ಮಾರ್ಚ್ 13 -- ಬಹುಮುಖ ಪ್ರತಿಭೆ ಮತ್ತು ಕೌಶಲ್ಯಯುತ ಫೀಲ್ಡಿಂಗ್​ಗೆ ಹೆಸರುವಾಸಿಯಾಗಿದ್ದ ಭಾರತದ ಮಾಜಿ ಆಲ್​ರೌಂಡರ್​ ಸೈಯದ್ ಅಬಿದ್ ಅಲಿ ಅವರು ದೀರ್ಘಕಾಲದ ಅನಾರೋಗ್ಯದ ಕಾರಣ ಬುಧವಾರ (ಮಾರ್ಚ್ 12) ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಟೀಮ್ ಇಂಡಿಯಾ ಪರ ಒಟ್ಟು 34 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು, ಎಂಎಕೆ ಪಟೌಡಿ, ಎಂಎಲ್ ಜೈಸಿಂಹ, ಅಬ್ಬಾಸ್ ಅಲಿ ಬೇಗ್ ಅವರೊಂದಿಗೆ ಹೈದರಾಬಾದ್​ನ ಪ್ರಸಿದ್ಧ ಕ್ರಿಕೆಟಿಗರ ಗುಂಪಿನ ಭಾಗವಾಗಿದ್ದರು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಿಧನರಾಗಿದ್ದಾರೆ. ಮಾಜಿ ಕ್ರಿಕೆಟಿಗನ ನಿಧನದ ಸುದ್ದಿಯನ್ನು ಉತ್ತರ ಅಮೆರಿಕನ್ ಕ್ರಿಕೆಟ್ ಲೀಗ್ ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದೆ.

1967ರ ಡಿಸೆಂಬರ್​​ನ ಅಡಿಲೇಡ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದ ಅಬಿದ್ ಅಲಿ, ಮೊದಲ ಇನ್ನಿಂಗ್ಸ್​ನಲ್ಲಿ 55 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಅದೇ ಸರಣಿಯ ಸಿಡ್ನಿ ಟೆಸ್ಟ್​​ನಲ್ಲಿ 78 ಮತ್ತು 81 ರನ್ ಗಳಿಸುವ ಮೂಲಕ ಬ್ಯಾಟಿಂಗ್ಸ್​...