ಭಾರತ, ಏಪ್ರಿಲ್ 2 -- ಅತಿ ಹೆಚ್ಚು ಪಂದ್ಯಗಳನ್ನಾಡಿದ ಭಾರತ ತಂಡದ ಆಟಗಾರ್ತಿ ವಂದನಾ ಕಟಾರಿಯಾ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ್ದಾರೆ. 15 ವರ್ಷಗಳ ಸುವರ್ಣ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ತಮ್ಮ ಸುದೀರ್ಘ ಹಾಕಿ ವೃತ್ತಿಬದುಕಿಗೆ ನಿವೃತ್ತಿ ಪ್ರಕಟಿಸಿದ್ದಾರೆ. 320 ಪಂದ್ಯಗಳನ್ನು ಆಡಿರುವ 32 ವರ್ಷದ ಸ್ಟ್ರೈಕರ್ ವಂದನಾ, ಭಾರತೀಯ ಮಹಿಳಾ ಹಾಕಿ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2009ರಲ್ಲಿ ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡಿದ ಕಟಾರಿಯಾ, ತನ್ನ ವೃತ್ತಿಜೀವನದಲ್ಲಿ 158 ಗೋಲು ಕೂಡ ಗಳಿಸಿದ್ದಾರೆ. ಟೊಕಿಯೊ ಒಲಿಂಪಿಕ್ಸ್ 2020ರಲ್ಲಿ 4ನೇ ಸ್ಥಾನ ಪಡೆದ ಭಾರತೀಯ ತಂಡದ ಭಾಗವಾಗಿದ್ದರು. ಇದರಲ್ಲಿ ಅವರು ಹ್ಯಾಟ್ರಿಕ್ ಕೂಡ ಪಡೆದರು. ಈ ಸಾಧನೆ ಮಾಡಿದ ಮೊದಲ ಮತ್ತು ಏಕೈಕ ಭಾರತೀಯ ಮಹಿಳಾ ಆಟಗಾರ್ತಿ. ಹರಿದ್ವಾರದ ರೋಷನಾಬಾದ್ ನಿವಾಸಿಯಾದ ಕಟಾರಿಯಾ, ಫೆಬ್ರವರಿಯಲ್ಲಿ ಭುವನೇಶ್ವರದಲ್ಲಿ ನಡೆದ ಎಫ್ಐಎಚ್ ಪ್ರೊ ಲೀಗ್ನಲ್ಲಿ ಭಾರತ ಪರ ಕೊನೆಯ ಪಂದ್ಯವನ್ನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.