ಭಾರತ, ಏಪ್ರಿಲ್ 15 -- ಇಂಡಿಯನ್ ಪ್ರೀಮಿಯರ್ ಲೀಗ್​​ 31ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ಗೆ ಪಂಜಾಬ್ ಕಿಂಗ್ಸ್​ ಏಟಿಗೆ ಎದಿರೇಟು ನೀಡಿದೆ. ಹರ್ಷಿತ್ ರಾಣಾ (25/3), ವರುಣ್ ಚಕ್ರವರ್ತಿ (21/2) ಮತ್ತು ಸುನಿಲ್ ನರೈನ್ (14/2) ಅವರ ಮಾರಕ ಬೌಲಿಂಗ್ ದಾಳಿಗೆ ಪ್ರತಿದಾಳಿ ನಡೆಸಿದ ಪಂಜಾಬ್, ಹಾಲಿ ಚಾಂಪಿಯನ್ ಕೋಲ್ಕತ್ತಾಗೆ ಠಕ್ಕರ್ ಕೊಟ್ಟಿದೆ. ಕೇವಲ 111 ರನ್​ ಗಳಿಸಿದ್ದರೂ ಡಿಫೆಂಡ್ ಮಾಡಿಕೊಂಡ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ನೈಟ್ ರೈಡರ್ಸ್ ತಂಡವನ್ನು 16 ರನ್​ಗಳಿಂದ ಮಣಿಸಿದೆ. ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡು ಗೆದ್ದ ಕಿಂಗ್ಸ್, ಐಪಿಎಲ್​ನಲ್ಲಿ ಚರಿತ್ರೆ ಸೃಷ್ಟಿಸಿದೆ. ಈ ಸಾಧಾರಣ ಗುರಿ ಬೆನ್ನಟ್ಟಿದ ಕೆಕೆಆರ್​ 95 ರನ್​ಗೆ ಆಲೌಟ್ ಆಯಿತು.

Published by HT Digital Content Services with permission from HT Kannada....