ಭಾರತ, ಜನವರಿ 31 -- 'ನೋಡಿದವರು ಏನಂತಾರೆ' ಸಿನಿಮಾ ಜನವರಿ 31ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದ ಹೆಸರೇ ಕುತೂಹಲ ಮೂಡಿಸುವಂತಿದೆ. ಇದೊಂದು ಭಾವಯಾನಕ್ಕೆ ವೀಕ್ಷಕರನ್ನು ಕರೆದೊಯ್ಯುತ್ತದೆ. ನವೀನ್ ಶಂಕರ್ ಅಭಿನಯವೇ ಚಿತ್ರದುದ್ದಕ್ಕೂ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ನಾಯಕ ಇಲ್ಲದ ಒಂದು ದೃಶ್ಯವೂ ಈ ಸಿನಿಮಾದಲ್ಲಿ ಇಲ್ಲ ಎಂದೇಹೇಳಬಹುದು. "ಬೆಂಗಳೂರಿನಲ್ಲಿದ್ದುಕೊಂಡು, ಒಳ್ಳೆಯ ಕೆಲಸ ಹಾಗೂ ಸಂಪಾದನೆ ಮಾಡಿಕೊಂಡು ಬದುಕುತ್ತಿದ್ದರೂ ಜೀವನದಲ್ಲಿ ನೆಮ್ಮದಿಯೇ ಇಲ್ಲ. ನಾವು ಇನ್ನೊಬ್ಬರ ಮಾತನ್ನು ಕೇಳಿಕೊಂಡು ಅವರ ಕೈಕೆಳಗೆ ದಾಸರಾಗಿ ಬದುಕುತ್ತಿದ್ದೇವೆ" ಎಂದೆನಿಸುವ ಎಲ್ಲರಿಗೂ ಈ ಸಿನಿಮಾ ಹತ್ತಿರವಾಗುತ್ತಾ ಹೋಗುತ್ತದೆ. ಮುಖ್ಯವಾಗಿ ಯುವಜನತೆಯನ್ನು ಈ ಸಿನಿಮಾ ಹೆಚ್ಚಾಗಿ ಆವರಿಸುತ್ತದೆ.
ಸಿನಿಮಾ ಹೇಗಿದೆ?ಸಿನಿಮಾದಲ್ಲಿ ಜನರ ಭಾವನೆಯನ್ನು ನೇರವಾಗಿ ಸಂಪರ್ಕಿಸುತ್ತದೆ. ಚಿತ್ರದ ನಾಯಕನ ಪರಿಸ್ಥಿತಿ ಹೇಗಿದೆಯೋ ಇಂದು ಸಾಕಷ್ಟು ಜನ ಅದೇ ರೀತಿ ಬದುಕುತ್ತಿದ್ದಾರೆ. ಕೆಲಸ ಮಾಡಿ ಹಣ ಸಂಪಾದನೆ ಮಾಡಬೇಕು, ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.