ಭಾರತ, ಜನವರಿ 31 -- 'ನೋಡಿದವರು ಏನಂತಾರೆ' ಸಿನಿಮಾ ಜನವರಿ 31ರಂದು ಥಿಯೇಟರ್‍‌ಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದ ಹೆಸರೇ ಕುತೂಹಲ ಮೂಡಿಸುವಂತಿದೆ. ಇದೊಂದು ಭಾವಯಾನಕ್ಕೆ ವೀಕ್ಷಕರನ್ನು ಕರೆದೊಯ್ಯುತ್ತದೆ. ನವೀನ್‌ ಶಂಕರ್ ಅಭಿನಯವೇ ಚಿತ್ರದುದ್ದಕ್ಕೂ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ನಾಯಕ ಇಲ್ಲದ ಒಂದು ದೃಶ್ಯವೂ ಈ ಸಿನಿಮಾದಲ್ಲಿ ಇಲ್ಲ ಎಂದೇಹೇಳಬಹುದು. "ಬೆಂಗಳೂರಿನಲ್ಲಿದ್ದುಕೊಂಡು, ಒಳ್ಳೆಯ ಕೆಲಸ ಹಾಗೂ ಸಂಪಾದನೆ ಮಾಡಿಕೊಂಡು ಬದುಕುತ್ತಿದ್ದರೂ ಜೀವನದಲ್ಲಿ ನೆಮ್ಮದಿಯೇ ಇಲ್ಲ. ನಾವು ಇನ್ನೊಬ್ಬರ ಮಾತನ್ನು ಕೇಳಿಕೊಂಡು ಅವರ ಕೈಕೆಳಗೆ ದಾಸರಾಗಿ ಬದುಕುತ್ತಿದ್ದೇವೆ" ಎಂದೆನಿಸುವ ಎಲ್ಲರಿಗೂ ಈ ಸಿನಿಮಾ ಹತ್ತಿರವಾಗುತ್ತಾ ಹೋಗುತ್ತದೆ. ಮುಖ್ಯವಾಗಿ ಯುವಜನತೆಯನ್ನು ಈ ಸಿನಿಮಾ ಹೆಚ್ಚಾಗಿ ಆವರಿಸುತ್ತದೆ.

ಸಿನಿಮಾ ಹೇಗಿದೆ?ಸಿನಿಮಾದಲ್ಲಿ ಜನರ ಭಾವನೆಯನ್ನು ನೇರವಾಗಿ ಸಂಪರ್ಕಿಸುತ್ತದೆ. ಚಿತ್ರದ ನಾಯಕನ ಪರಿಸ್ಥಿತಿ ಹೇಗಿದೆಯೋ ಇಂದು ಸಾಕಷ್ಟು ಜನ ಅದೇ ರೀತಿ ಬದುಕುತ್ತಿದ್ದಾರೆ. ಕೆಲಸ ಮಾಡಿ ಹಣ ಸಂಪಾದನೆ ಮಾಡಬೇಕು, ...