Bengaluru, ಮೇ 19 -- ಬೆಂಗಳೂರು: ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿ ಹೋಂಡಾ ರೆಬೆಲ್ 500 ಪ್ರೀಮಿಯಂ ಕ್ರೂಸರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಹೋಂಡಾ ರೆಬೆಲ್ 500 ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 5.12 ಲಕ್ಷಗಳಾಗಿದೆ. ಕಂಪನಿಯ ಬಿಗ್ವಿಂಗ್ ಟಾಪ್ಲೈನ್ ಡೀಲರ್ ಶಿಪ್ ಮೂಲಕ ಮಾರಾಟವಾಗಲಿರುವ ಈ ಬೈಕ್ ಗುರುಗ್ರಾಮ್, ಮುಂಬೈ ಮತ್ತು ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಬುಕಿಂಗ್ ಮಾಡಿರುವ ಗ್ರಾಹಕರಿಗೆ ಜೂನ್ 2025 ರಿಂದ ಬೈಕ್ ದೊರೆಯಲಿದೆ.
ರೆಬೆಲ್ 500 ಹೋಂಡಾದ ಜಾಗತಿಕ ಕ್ರೂಸರ್ ಸರಣಿಯ ಭಾಗವಾಗಿ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದೆ. ರೆಬೆಲ್ 500 ತನ್ನ ಸ್ಪಷ್ಟವಾದ ಸ್ಟ್ರೀಟ್ ಪ್ರೆಸೆನ್ಸ್, ಟಾರ್ಕ್ ಎಂಜಿನ್ ಮತ್ತು ಲೇಡ್-ಬ್ಯಾಕ್ ಎರ್ಗೊನಾಮಿಕ್ಸ್ನೊಂದಿಗೆ, ಆಕರ್ಷಕ ವಿನ್ಯಾಸವನ್ನು ಹುಡುಕುತ್ತಿರುವ ಸವಾರರಿಗೆ ಸೂಕ್ತವಾಗಿದೆ.
ರೆಬೆಲ್ 500 ಬೈಕ್ 471 ಸಿಸಿ, ಲಿಕ್ವಿಡ್ ಕೂಲ್ಡ್, ಪ್ಯಾರಲಲ್-ಟ್ವಿನ್ ಎಂಜಿನ್ ಹೊಂದಿದ್ದು, 8,500 ಆರ್ಪಿಎಂನಲ್ಲಿ 34 ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.