ಭಾರತ, ಮೇ 18 -- ಹೈದ್ರಾಬಾದ್: ಭಾನುವಾರ ಬೆಳಗಿನ ಜಾವ ಹೈದರಾಬಾದ್ನ ಪ್ರಸಿದ್ದ ಪ್ರವಾಸಿ ಸ್ಥಳವಾದ ಚಾರ್ಮಿನಾರ್ ಬಳಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 17 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ 3 ಮಹಿಳೆಯರು ಮತ್ತು ಎಂಟು ಮಕ್ಕಳು ಸೇರಿದ್ದಾರೆ. ಚಾರ್ಮಿನಾರ್ ಕಟ್ಟಡದ ಸಮೀಪವೇ ಇರುವ ಚಿನ್ನದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದು ನಿಧಾನವಾಗಿ ಹರಡಿ ಇಡೀ ಕಟ್ಟಡವನ್ನು ವ್ಯಾಪಿಸಿದೆ. ಇದರಿಂದ ಕಟ್ಟಡದಲ್ಲಿದ್ದ ಕೆಲವರು ಸುಟ್ಟು ಕರಕಲಾದರೆ, ಇನ್ನು ಕೆಲವರು ಉಸಿರುಗಟ್ಟಿ ಜೀವ ಕಳೆದುಕೊಂಡಿದ್ದಾರೆ. ಚಾರ್ಮಿನಾರ್ ಪಕ್ಕದಲ್ಲಿರುವ ಆಭರಣ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ಆಭರಣ ಅಂಗಡಿಯನ್ನು ಹೊಂದಿದ್ದ ಮೂರು ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದು ವ್ಯಾಪಕವಾಗಿ ಹರಡಿದೆ. "ಸುಮಾರು ಒಂಬತ್ತು ಮಂದಿ ಸುಟ್ಟಗಾಯಗಳಿಗೆ ಒಳಗಾಗಿದ್ದರು ಮತ್ತು ಉಳಿದವರು ಉಸಿರುಗಟ್ಟಿ ಸಾವನ್ನಪ್ಪಿದರು" ಎಂದು ಹಿರಿಯ ಅಗ್ನಿಶಾಮಕ ಅಧಿಕಾರಿ ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.