Hyderabad, ಮಾರ್ಚ್ 26 -- ಏಷ್ಯಾದ ಅತಿದೊಡ್ಡ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಹೈದ್ರಾಬಾದ್‌ನ ನಾರಾಯಣ ಶಿಕ್ಷಣ ಸಂಸ್ಥೆಗಳ ಶಾಖೆಗಳು ಉತ್ತರ ಭಾರತ ಸೇರಿದಂತೆ ಭಾರತದ 12 ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿದೆ. ಈ ಶೈಕ್ಷಣಿಕ ವರ್ಷದಲ್ಲಿಯೇ ಹೊಸದಾಗಿ ನಾರಾಯಣ ಶಿಕ್ಷಣ ಸಂಸ್ಥೆಗಳ 52 ಹೊಸ ಕ್ಯಾಂಪಸ್‌ಗಳು ಆರಂಭಿಸಲಾಗಿದೆ. ಈ ರೀತಿ ಹೊಸ ಶಾಖೆಗಳನ್ನು ಪ್ರಾರಂಭಿಸುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ಪ್ರಜಾಪ್ರಭುತ್ವಗೊಳಿಸುವ ತನ್ನ ಧ್ಯೇಯದಲ್ಲಿ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಈ ಕಾರ್ಯ ಚಟುವಟಿಕೆಯ ವಿಸ್ತರಣೆಯು ನಾರಾಯಣ ಸಂಸ್ಥೆಯ ಹೆಜ್ಜೆಗುರುತನ್ನು ಭಾರತದಾದ್ಯಂತ 907 ಶಾಖೆಗಳಿಗೆ ಏರಿಸಿದಂತಾಗಿದೆ. ಇದು ಭಾರತದ 23 ರಾಜ್ಯಗಳಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ತರಬೇತಿ ಕೇಂದ್ರಗಳಿಗೆ ವ್ಯಾಪಿಸಿದಂತಾಗಿದೆ.

ಈ ಪ್ರಯತ್ನದೊಂದಿಗೆ ನಾರಾಯಣ ತನ್ನ ರಚನಾತ್ಮಕ ಪಠ್ಯಕ್ರಮ, ಮುಂದುವರಿದ ಬೋಧನಾ ವಿಧಾನಗಳು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಂಡೇ ಶೈಕ್ಷಣಿಕ ಕಾರ್ಯವ್ಯಾಪ್ತಿ ವಿಸ್ತ...