ಭಾರತ, ಏಪ್ರಿಲ್ 16 -- ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (PSL)ನಲ್ಲಿ ಪ್ರಸ್ತುತ ಲಾಹೋರ್ ಖಲಂದರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಇಂಗ್ಲಿಷ್ ಕ್ರಿಕೆಟಿಗ ಸ್ಯಾಮ್ ಬಿಲ್ಲಿಂಗ್ಸ್ ಅವರು ತಮಗೆ ಕೇಳಿದ ಪ್ರಶ್ನೆಯೊಂದಕ್ಕೆ ಪಾಕ್ ಪತ್ರಕರ್ತರೊಬ್ಬರಿಗೆ ತಬ್ಬಿಬ್ಬಾಗುವಂತೆ ಉತ್ತರಿಸಿದ್ದಾರೆ. ಪಿಎಸ್​ಎಲ್ ಮತ್ತು ಐಪಿಎಲ್ ಈ ಎರಡರಲ್ಲಿ ಯಾವುದು ಉತ್ತಮ ಎನ್ನುವ ಪ್ರಶ್ನೆ ಹಲವು ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಅಂದು ಇಂದು ಮುಂದೆಯೂ ನೀಡುವ ಉತ್ತರ ಒಂದೇ, ಅದು ಐಪಿಎಲ್ ಎಂದು. ಕ್ರಿಕೆಟ್​ ಬಗ್ಗೆ ಅಲ್ಪ ಜ್ಞಾನ ಇದ್ದವರೂ ಹೇಳುವ ಉತ್ತರವೂ ಇದೇ ಆಗಿರುತ್ತದೆ. ಹೀಗಿದ್ದರೂ ಪಾಕಿಸ್ತಾನ ಪತ್ರಕರ್ತರು ಪದೆಪದೇ ಇದೇ ಪ್ರಶ್ನೆ ಕೇಳುವ ಮೂಲಕ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಆದರೂ ಅವರು ತಮ್ಮ ಭ್ರಮೆಯಿಂದ ಹೊರಬಂದಿಲ್ಲ.

ಹಾಲಿ-ಮಾಜಿ ಕ್ರಿಕೆಟರ್​​ಗಳೇ ಪಿಎಸ್​ಎಲ್​ಗಿಂತ ಐಪಿಎಲ್ ಬೆಸ್ಟ್​ ಎಂದು ಹೇಳಿದ್ದುಂಟು. ಅಷ್ಟೇ ಯಾಕೆ, ಪಾಕಿಸ್ತಾನ ಸೂಪರ್ ಲೀಗ್​ನಲ್ಲೇ ಆರ್​ಸಿಬಿ ಅಭಿಮಾನಿಗಳು ಕಂಡಿದ್ದೇ ಇದೇ ಉತ್ತಮ ಉದಾಹರಣೆ ಎನ್ನಬಹುದು. ಇ...