ಭಾರತ, ಮಾರ್ಚ್ 23 -- ಆನೇಕಲ್ ಹುಸ್ಕೂರು ಮದ್ದೂರಮ್ಮ ಜಾತ್ರೆ ಅಂದರೆ ಕುರುಜುಗಳದ್ದೇ ಆಕರ್ಷಣೆ. ಕುರುಜುಗಳು ಅಂದರೆ ತೇರುಗಳು. ಹಿಂದೆಲ್ಲ 15 -16 ತೇರುಗಳು ಜಾತ್ರೆಯಲ್ಲಿ ಪಾಲ್ಗೊಂಡ ಇತಿಹಾಸವಿದೆ. ಈ ಬಾರಿ 6 ತೇರುಗಳಷ್ಟೇ ಇದ್ದವು. ದೇವಸ್ಥಾನದ ಇತಿಹಾಸ, ಕುರುಜುಗಳ ವಿಶೇಷ ಅಂಶಗಳ ವಿವರ ಇಲ್ಲಿದೆ.

ಬೆಂಗಳೂರು ನಗರದಿಂದ 15 ಕಿಮೀ ದೂರದಲ್ಲಿರುವ ಆನೇಕಲ್ ತಾಲೂಕು ಹುಸ್ಕೂರು ಗ್ರಾಮದಲ್ಲಿದೆ ಈ ಐತಿಹಾಸಿಕ ಮದ್ದೂರಮ್ಮ ದೇವಿ ದೇವಸ್ಥಾನ. ಗ್ರಾಮೀಣ ಸೊಗಡು ಹೊಂದಿರುವ ಈ ಜಾತ್ರೆಯಲ್ಲಿ ತೇರುಗಳೇ ಪ್ರಮುಖ ಆಕರ್ಷಣೆ. ಮದ್ದೂರಮ್ಮ ದೇವಿ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮದ ಜನರು ತೇರು ಕಟ್ಟಿ ದೇವಸ್ಥಾನದ ಆವರಣಕ್ಕೆ ತಂದು ಜಾತ್ರೆ ನಡೆಸುವುದು ವಾಡಿಕೆ.

ಹುಸ್ಕೂರು ಮದ್ದೂರಮ್ಮ ದೇವಾಲಯ 11ನೇ ಶತಮಾನದ್ದು ಎನ್ನುತ್ತಿವೆ ಐತಿಹ್ಯಗಳು, ಹೈದರಾಲಿ, ಟಿಪ್ಪು ಸುಲ್ತಾನ್ ಈ ದೇಗುಲಕ್ಕೆ ಕಾಣಿಕೆಯಾಗಿ ನೀಡಿದ ಚಿನ್ನಾಭರಣಗಳನ್ನು ಆಡಳಿತ ಮಂಡಳಿ ದಾಖಲೆಯಾಗಿ ಇಟ್ಟುಕೊಂಡಿದೆ. ಟಿಪ್ಪು ಮತ್ತು ಸೈನಿಕರು ಯಾತ್ರೆ ಮಾಡುವಾಗ ಹುಸ್ಕೂರು ಮದ್ದೂರಮ್...