Bengaluru, ಮೇ 17 -- ಮಂಗಳೂರು: ನಗರದ ಹೊರವಲಯದ ಕುಪ್ಪೆಪದವಿನ ಬದ್ರಿಯ ಜುಮಾ ಮಸೀದಿ ಮುಸಲ್ಮಾನರೂ ಮಾತ್ರವಲ್ಲದೆ ಹಿಂದೂಗಳು ಹಾಗೂ ಸ್ಥಳೀಯ ಕ್ರೆಸ್ತರ ಸಹಕಾರದೊಂದಿಗೆ ನವೀಕೃತಗೊಂಡು ಅದ್ಧೂರಿಯಾಗಿ ಕಂಗೊಳಿಸುತ್ತಿದೆ. ಸುಮಾರು 72 ವರ್ಷಗಳ ಇತಿಹಾಸ ಹೊಂದಿರುವ ಕುಪ್ಪೆಪದವಿನ ಐತಿಹಾಸಿಕ ಮಸೀದಿ ನವೀಕರಣ ಕಾರ್ಯದಲ್ಲಿ ಹಿಂದೂ ಶಿಲ್ಪಿಗಳು ಕೈ ಜೋಡಿಸಿದ್ದಾರೆ ಮಾತ್ರವಲ್ಲದೆ, ಸ್ಥಳೀಯ ಹಿಂದೂ, ಕ್ರೆಸ್ತ ಬಂಧುಗಳು ಮಸೀದಿಯ ನಿರ್ಮಾಣಕ್ಕೆ ಮರವನ್ನು ನೀಡಿದ್ದಾರೆ. ಈ ಮೂಲಕ ಕೋಮು ಸಾಮರಸ್ಯ ಸಾರುವ ಮಸೀದಿಯಾಗಿ ಗುರುತಿಸಲ್ಪಟ್ಟಿದೆ. 5-1-1958ರಲ್ಲಿ ಈ ಮಸೀದಿ ನಿರ್ಮಾಣಗೊಂಡಿದೆ ಎನ್ನಲಾಗಿದ್ದು. 72 ವರ್ಷ ಬಳಿಕ ನವೀಕೃತಗೊಂಡಿದ್ದು, ಸರಿಸುಮಾರು 80 ಲಕ್ಷ ರೂ. ಮೌಲ್ಯದ ಸಾಗುವಾನಿ ಮರ ಬಳಸಲಾಗಿದೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಮಸೀದಿಯ ಮರು ನಿರ್ಮಾಣ ನಡೆದಿದೆ.
ಸ್ಥಳೀಯರೇ ಆದ ಎಂಜಿನಿಯರ್ ಪ್ರಣೀತ್ ರೈ ಮಸೀದಿಗೆ ನೀಲನಕಾಶೆ ತಯಾರಿಸಿದ್ದಾರೆ. ಕೊಂಕಣಿ ಸಮುದಾಯದ ವಾಸ್ತುಶಿಲ್ಪಿ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ರಾಜ ಸಾಗರ್ ನೇ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.