ಭಾರತ, ಫೆಬ್ರವರಿ 23 -- ಕಾಸರಗೋಡು: ಶಾಲಾ ತರಗತಿಯಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಿನ ಮಧುರ ಬಾಂಧವ್ಯದ ಹಲವು ನಿದರ್ಶನಗಳನ್ನು ನಾವೆಲ್ಲಾ ನೋಡಿದ್ದೇವೆ. ಮಕ್ಕಳು ಶಾಲೆಯಿಂದ ಬೀಳ್ಕೊಡುವಾಗ ಶಿಕ್ಷಕರು ಅನುಭವಿಸುವ ನೋವು, ತಮ್ಮ ನೆಚ್ಚಿನ ಶಿಕ್ಷಕರು ವಿದಾಯ ಹೇಳುವಾಗ ಮಕ್ಕಳ ಭಾವುಕ ಕ್ಷಣಗಳಿಗೆ ಹಲವು ಶಾಲೆ-ಕಾಲೇಜುಗಳು ಸಾಕ್ಷಿಯಾಗಿವೆ. ಈ ನಡುವೆ ಇಲ್ಲೊಂದು ವಿಶಿಷ್ಟ ನಿದರ್ಶನವು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ನಂಟಿಗೆ ಒಂದೊಳ್ಳೆ ಉದಾಹರಣೆಯಾಗಿ ನಿಲ್ಲುತ್ತದೆ.

ಈ ಶಿಕ್ಷಕಿಗೆ ತಮ್ಮ ವಿದ್ಯಾರ್ಥಿಗಳೆಂದರೆ, ತಮ್ಮ ಮಕ್ಕಳಷ್ಟೇ ಮಮತೆ. ಟೀಚರ್‌ ಎಂಬ ಧ್ವನಿ ಕೇಳಿಸಿದರೆ ಸಾಕು, ಯಾವ ವಿದ್ಯಾರ್ಥಿ ತನ್ನನ್ನು ಅಕ್ಕರೆಯಿಂದ ಕರೆಯುತ್ತಿದ್ದಾರೆ ಎಂಬುದನ್ನು ಗುರುತು ಹಿಡಿಯುತ್ತಾರೆ. ಆ ಮಗುವಿನ ಮುಖ ನೋಡದೆ, ಅವರು ಯಾರೆಂದು ಹೇಳಬಲ್ಲರು. ಧ್ವನಿಯಿಂದಲೇ ವಿದ್ಯಾರ್ಥಿಗಳನ್ನು ಗುರುತಿಸುವ ವಿಶಿಷ್ಟ ಕಲೆಯಿಂದ ಶಿಕ್ಷಕಿಯೊಬ್ಬರು ಸುದ್ದಿಯಾಗಿದ್ದಾರೆ. ಅಂದಹಾಗೆ ಈ ಶಿಕ್ಷಕಿಯ ಬಗ್ಗೆ ತಿಳಿದುಕೊಳ್ಳಲು, ನೀವು ಕಾಸರಗೋಡ...