ಭಾರತ, ಏಪ್ರಿಲ್ 6 -- ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶನದ ಕನ್ನಡದ ಸೂಪರ್ ಹಿಟ್ ಸಿನಿಮಾ ಕಿರಿಕ್ ಪಾರ್ಟಿ ಹಿಂದಿಗೆ ರಿಮೇಕ್ ಆಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. 2016ರಲ್ಲಿ ಬಿಡುಗಡೆಯಾದ ಕಿರಿಕ್ ಪಾರ್ಟಿ ಸಿನಿಮಾವು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಸಿನಿ ಕರಿಯರ್ಗೆ ಹೊಸ ಅರ್ಥ ನೀಡಿತ್ತು. ಆ ಕಾಲದ ಸೂಪರ್ ಹಿಟ್ ಸಿನಿಮಾ ಕಿರಿಕ್ ಪಾರ್ಟಿಯನ್ನು ಜನ ಈಗಲೂ ಮೆಚ್ಚಿ ನೋಡುತ್ತಿದ್ದಾರೆ. ಮಾತ್ರವಲ್ಲ ಇಂತಹ ಸಿನಿಮಾ ಮತ್ತೆ ಬರಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಚಿತ್ರವೀಗ ಹಿಂದಿಗೆ ರಿಮೇಕ್ ಆಗುತ್ತಿದ್ದು, ಬಾಲಿವುಡ್ ನಟ ಸುನಿಲ್ ಶೆಟ್ಟಿ ಚಿತ್ರದ ರಿಮೇಕ್ ಹಕ್ಕು ಪಡೆದಿದ್ದಾರೆ ಎನ್ನಲಾಗುತ್ತಿದೆ.
ಸುನಿಲ್ ಶೆಟ್ಟಿ ತಮ್ಮ ಪುತ್ರ ಅಹಾನ್ ಶೆಟ್ಟಿಗಾಗಿ ಹಿಂದಿಯಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳ ಜೀವನವನ್ನು ತೋರಿಸಿದ್ದ ಈ ಚಿತ್ರವು 2018ರಲ್ಲಿ ಕಿಕ್ ಪಾರ್ಟಿ ಎನ್ನುವ ಹೆಸರಿನಲ್ಲಿ ತೆಲುಗಿಗೂ ರಿಮೇಕ್ ಆಗಿತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.