Hassan, ಮೇ 2 -- ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಷಣ್ಮುಖ ಎಂಬ ವ್ಯಕ್ತಿಯನ್ನು ತುಳಿದು ಸಾಯಿಸಿದ್ದ ಹನ್ನೆರಡು ವರ್ಷದ ಗಂಡಾನೆಯನ್ನು ಕರ್ನಾಟಕ ಅರಣ್ಯ ಇಲಾಖೆ ಸೆರೆ ಹಿಡಿದಿದೆ.
ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಮಾಗಡಿ ಎಸ್ಟೇಟ್ ನಲ್ಲಿ ಬೀಡು ಬಿಟ್ಟಿದ್ದ ಗಂಡಾನೆಯನ್ನು ಸಾಕಾನೆಗಳ ಸಹಕಾರದಿಂದ ಸೆರೆ ಹಿಡಿಯಲಾಯಿತು.
ಸಕಲೇಶಪುರ ಬೈಕೆರೆ ಭಾಗದಲ್ಲಿ ಉಪಟಳ ನೀಡುತ್ತಿದ್ದ ಆನೆ ಸೆರೆ ಹಿಡಿಯಲು ದೂರುಗಳು ಬಂದಿದವು. ಈ ಹಿನ್ನೆಲೆಯಲ್ಲಿ ಹಾಸನ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ನೇತೃತ್ವದಲ್ಲಿ ಗುರುವಾರ ಕಾರ್ಯಾಚರಣೆ ನಡೆಯಿತು.
ನಾಲ್ಕೈದು ಸಾಕಾನೆಗಳ ಸಹಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಇರುವ ಜಾಡು ಹಿಡಿದು ಹೋಯಿತು, ಮಾಗಡಿ ಎಸ್ಟೇಟ್ನಲ್ಲಿ ಆನೆ ಇರುವ ಮಾಹಿತಿ ತಿಳಿದು ತಂಡವು ಅರವಳಿಕೆ ನೀಡಿ ಆನೆ ಸೆರೆ ಹಿಡಿಯಿತು.
ಬಳಿಕ ಆನೆ ತಜ್ಞರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆನೆಗೆ ರೇಡಿಯೋ ಕಾಲರ್ ಅನ್ನು ಅಳವಡಿಸಿ ನಂತರ ಮತ್ತೊಂದು ಅರಣ್ಯ ಪ್ರದೇಶದಲ್ಲಿ ಬಂಧಮುಕ್ತಗೊಳಿಸಿತು.
ಹಾಸನ ಭಾಗದಲ್ಲಿ ಆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.