ಭಾರತ, ಏಪ್ರಿಲ್ 17 -- ಮಧ್ಯಮ ವರ್ಗದ ಕುಟುಂಬದ, ನಮ್ಮನೆ-ನಿಮ್ಮನೆಯಲ್ಲೂ ನಡೆಯುವ ಒಂದು ಸಂಸಾರದ ಕಥೆಯನ್ನು ಹೊಂದಿರುವ ಧಾರಾವಾಹಿ 'ಆಸೆ'. ಈ ಧಾರಾವಾಹಿಯನ್ನು ನೋಡಿದವರಿಗೆ ಇದು ನಮ್ಮದೇ ಕಥೆ ಎನ್ನುವವಷ್ಟು ಹತ್ತಿರವಾಗುವಂತಿದೆ. ಧಾರಾವಾಹಿ ನಾಯಕ ಸೂರ್ಯ ಹಾಗೂ ನಾಯಕಿ ಮೀನಾ ಪಾತ್ರವಂತೂ ಜನರ ಮನಸ್ಸಿಗೆ ಸಾಕಷ್ಟು ಇಷ್ಟವಾಗುತ್ತದೆ. ಈ ಧಾರಾವಾಹಿ ಪ್ರತಿಯೊಂದು ಪಾತ್ರವೂ ಬದುಕಿನ ಒಂದೊಂದು ಪಾಠವನ್ನು ಹೇಳುವಂತಿದೆ.

ಆಸೆ ಧಾರಾವಾಹಿ ಇತ್ತೀಚಿನ ಜನ ಮೆಚ್ಚಿದ ಧಾರಾವಾಹಿಯಾಗುತ್ತಿದೆ. ಸೂರ್ಯ-ಮೀನಾ, ರಂಗನಾಥ-ಶಾಂತಿ, ರೋಹಿಣಿ-ಮನೋಜ್‌, ರವಿ-ಶೃತಿ ಹೀಗೆ ಪ್ರತಿಯೊಂದು ಪಾತ್ರವೂ ಸಮಾಜದ ವಿವಿಧ ಮುಖಗಳನ್ನು ತೆರೆದಿಡುತ್ತದೆ. ಮಧ್ಯಮ ವರ್ಗದ ಕುಟುಂಬದವರಿಗೆ ಈ ಧಾರಾವಾಹಿ ಇಷ್ಟವಾಗದೇ ಇರಲು ಸಾಧ್ಯವಿಲ್ಲ. ಆಪ್ತ ಕಥಾ ಹಿನ್ನೆಲೆ, ನಟ-ನಟಿಯರು ತಮ್ಮ ಪಾತ್ರಗಳಿಗೆ ಜೀವ ತುಂಬಿರುವುದು ಆಸೆಯನ್ನು ಪ್ರೇಕ್ಷಕರು ಇನ್ನಷ್ಟು ಮೆಚ್ಚುವಂತೆ ಮಾಡಿದೆ.

ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ರಾತ್ರಿ 7.30ಕ್ಕೆ ಪ್ರಸಾರವಾಗುವ ಆಸೆ ಧಾರಾವಾಹಿಯನ್...