ಭಾರತ, ಮೇ 5 -- ಸ್ಕೈಪ್ ಇನ್ನಿಲ್ಲ; ಮೈಕ್ರೋಸಾಫ್ಟ್ ತನ್ನ ಅಧೀನದ ಸ್ಕೈಪ್ ಎಂಬ ಬಹಳ ಜನಪ್ರಿಯ ವಿಡಿಯೋ ಕರೆ ಆ್ಯಪ್ ಅನ್ನು ಇಂದು (ಮೇ 5) ಅಧಿಕೃತವಾಗಿ ಸ್ಥಗಿತಗೊಳಿಸುತ್ತಿದೆ. ಇಂಟರ್ನೆಟ್ ಯುಗದ ಆರಂಭಿಕ ಆ್ಯಪ್ ಇದಾಗಿದ್ದು, ಎರಡು ದಶಕಕ್ಕೂ ಹೆಚ್ಚು ಕಾಲ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿತ್ತು. ಈಗ ಸ್ಕೈಪ್ ಬಳಕೆದಾರರನ್ನು ಮೈಕ್ರೋಸಾಫ್ಟ್ ಟೀಮ್ಸ್ (ಫ್ರೀ) ಬಳಸುವಂತೆ ಮೈಕ್ರೋಸಾಫ್ಟ್ ಉತ್ತೇಜಿಸುತ್ತಿದೆ. ಸ್ಕೈಪ್ನಲ್ಲಿದ್ದ ಚಾಟ್ಸ್ ಮತ್ತು ಸಂಪರ್ಕ ವಿವರಗಳು ಮೈಕ್ರೋಸಾಫ್ಟ್ ಟೀಮ್ಸ್ಗೆ ವರ್ಗಾವಣೆಯಾಗಲಿದೆ. ಸ್ಕೈಪ್ ಬಳಕೆದಾರರು ಅದೇ ಲಾಗಿನ್ ಪಾಸ್ವರ್ಡ್ ಬಳಸಿಕೊಂಡು ಮೈಕ್ರೋಸಾಫ್ಟ್ ಟೀಮ್ಸ್ಗೆ ಲಾಗಿನ್ ಆಗಿ ಬಳಕೆ ಮಾಡಬಹುದು ಎಂದು ಕಂಪನಿ ಹೇಳಿದೆ.
ಸಂವಹನ ಉಪಕರಣಗಳನ್ನು ಒಂದೆಡೆ ಸೇರಿಸಿ ಸಮಗ್ರ ಬಳಕೆದಾರ ಜಾಲವನ್ನು ಬೆಳೆಸಲು ಮೈಕ್ರೋಸಾಫ್ಟ್ ಮುಂದಾಗಿದೆ. ಹೀಗಾಗಿ ಎಲ್ಲರನ್ನೂ ಮೈಕ್ರೋಸಾಫ್ಟ್ ಟೀಮ್ಸ್ ಸೇರುವಂತೆ ಕಂಪನಿ ಉತ್ತೇಜಿಸುವುದನ್ನು ಮುಂದುವರಿಸಿದೆ. ಸ್ಕೈಪ್ ಹಳೆಯದಾಗಿದ್ದು, ಅತ್ಯಾಧುನಿಕ ಅಂಶಗಳಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.