Bengaluru, ಮೇ 20 -- ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಚೊಟ್ಟೆ ನೌಷಾದ್ ಮೇಲೆ ಜಿಲ್ಲಾ ಕಾರಾಗೃಹದ ಒಳಗಡೆಯೇ ಕೈದಿಗಳಿಂದ ದಾಳಿಗೆ ಯತ್ನ ನಡೆದಿದೆ. ಸೋಮವಾರ ಚೊಟ್ಟೆ ನೌಷಾದ್ ಪೊಲೀಸ್ ಕಸ್ಟಡಿಯ ಅಂತಿಮ ದಿನವಾಗಿತ್ತು. ಆದ್ದರಿಂದ ಪೊಲೀಸರು ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಪೊಲೀಸರು ಆತನನ್ನು ಮೈಸೂರು ಜೈಲಿಗೆ ಸ್ಥಳಾಂತರಿಸಲು ಉದ್ದೇಶಿಸಿದ್ದರು.
ಈ ನಡುವೆ ನೌಷಾದ್ ತನಗೆ ಜೈಲಿನಲ್ಲಿ ಮತ್ತೋರ್ವ ಕೈದಿಯನ್ನು ನೋಡಬೇಕೆಂದು ಹೇಳಿದ್ದರಿಂದ ಆತನನ್ನು ಜೈಲಿಗೆ ಕರೆತರಲಾಗಿತ್ತು. ಆತನನ್ನು ಕಂಡ ಜೈಲಿನ ಬಿ ಬ್ಯಾರಕ್ನ ಕೈದಿಗಳು ಕಲ್ಲು, ಕೈಗೆ ಸಿಕ್ಕ ವಸ್ತುಗಳನ್ನು ತೂರಿ ದಾಳಿಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ತಕ್ಷಣ ಜೈಲು ಸಿಬ್ಬಂದಿ ಆತನ ಮೇಲಿನ ದಾಳಿಯನ್ನು ತಪ್ಪಿಸಿದ್ದಾರೆ. ಜೈಲಿಗೆ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.
ಚೊಟ್ಟೆ ನೌಷಾದ್ ಸುಖಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.