ಭಾರತ, ಮೇ 15 -- ಅಮೀರ್ ಖಾನ್ ಅವರ ಮುಂಬರುವ ಚಿತ್ರ 'ಸೀತಾರೆ ಜಮೀನ್ ಪರ್' ಹೊಸ ವಿವಾದಕ್ಕೆ ಕಾರಣವಾಗಿದೆ. ಇದು 'ಚಾಂಪಿಯನ್ಸ್' ಚಿತ್ರದ "ಫ್ರೇಮ್-ಬೈ-ಫ್ರೇಮ್" ನಕಲು ಆಗಿರಬಹುದು ಎಂದು ತಿಳಿದುಕೊಳ್ಳುತ್ತಿದ್ದಾರೆ. ಚಾಂಪಿಯನ್ಸ್ ಎನ್ನುವುದು ಸ್ಪ್ಯಾನಿಷ್ ಚಿತ್ರ 'ಕ್ಯಾಂಪಿಯೋನ್ಸ್' ಇಂಗ್ಲಿಷ್ ರಿಮೇಕ್ ಆಗಿದೆ. ಆಮಿರ್ ಖಾನ್ ಅವರ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಈ ಟ್ರೈಲರ್ನಲ್ಲಿರುವ ಪ್ರತಿಫ್ರೇಮ್ಗಳು ಚಾಂಪಿಯನ್ಸ್ ಸಿನಿಮಾದ ಫ್ರೇಮ್ಗಳಿಗೆ (ದೃಶ್ಯಗಳಿಗೆ) ಹೋಲಿಕೆಯಾಗುತ್ತದೆ.
ಜಿಯೋಹಾಟ್ಸ್ಟಾರ್ನಲ್ಲಿ ಚಾಂಪಿಯನ್ಸ್ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಅವಮಾನಗೊಂಡ ಟ್ರೈನರ್ ಒಬ್ಬರು ಬೌದ್ಧಿಕವಾಗಿ ವಿಶೇಷ ಚೇತನರಾಗಿರುವ ಕ್ರೀಡಾಪಟುಗಳ ತಂಡಕ್ಕೆ ಮಾರ್ಗದರ್ಶನ ನೀಡುತ್ತಾರೆ. ವಿಶೇಷಚೇತನರ ಸಾಮರ್ಥ್ಯ ಬಹಿರಂಗಪಡಿಸುತ್ತಾರೆ. ಇದೇ ರೀತಿಯ ಕಥೆ ಇರುವ ಸುಳಿವನ್ನು ಸೀತಾರೆ ಜಮೀನ್ ಪರ್ ಟ್ರೈಲರ್ ನೀಡಿದೆ. ನೆಟಿಜನ್ಗಳು ರೆಡ್ಡಿಟ್ನಲ್ಲಿ ಫ್ರೇಮ್-ಬೈ-ಫ್ರೇಮ್ ಹೋಲಿಕೆಯ ಪೋಸ್ಟ್ಗಳನ್ನು ಹಂಚಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.