ಭಾರತ, ಏಪ್ರಿಲ್ 13 -- ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯಲ್ಲಿರುವ ಗ್ರೀನ್‌ ಸಿನಿಮಾದಲ್ಲಿ ಬಾಲಾಜಿ ಮನೋಹರ್, ಆರ್.ಜೆ. ವಿಕ್ಕಿ, ವಿಶ್ವನಾಥ್ ಮಾಂಡಲಿಕ, ಶಿವ ಮಂಜು,‌ ಡಿಂಪಿ ಫದ್ಯಾ, ಮುರುಡಯ್ಯ, ರಾಮಚಂದ್ರ, ಗಿರೀಶ್ ಅಭಿನಯಿಸಿದ್ದಾರೆ. ಕೆ‌‌.ಮಧುಸೂದನ್ ಛಾಯಾಗ್ರಹಣ ಹಾಗೂ ಶಕ್ತಿ ಸ್ಯಾಕ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಇಡೀ ಜೀವನವನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಹೊರಡುವ ನಾಯಕನ ಕಥೆಯೇ ಗ್ರೀನ್. ಸೈಕಲಾಜಿಕಲ್‌ ಎಳೆಯ ಗ್ರೀನ್‌ ಸಿನಿಮಾದಲ್ಲಿ ಒಂದಷ್ಟು ಹೊಸ ವಿಚಾರಗಳನ್ನು ಹೊತ್ತು ನಿರ್ದೇಶಕರು ಆಗಮಿಸಿದಂತಿದೆ. ಕಥಾನಾಯಕನ ಆಂತರಿಕ ಹೋರಾಟದ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ.

ಮಾನವ ಮನಸ್ಸಿನ ಸಂಕೀರ್ಣತೆಗಳನ್ನು ಪರಿಶೋಧಿಸುವ ಈ ಕಥೆ ವೈಯಕ್ತಿಕವಾಗಿ ನಮಗೆ ಬಹಳ ಹತ್ತಿರವಾದದ್ದು. ನಿರ್ಮಾಪಕರಾಗಿ ಈ ಚಿತ್ರಕ್ಕೆ ಆಕರ್ಷಿತರಾದ ಕಾರಣ, ತನ್ನೊಳಗಿನ ಆಂತರಿಕ ಹೋರಾಟಗಳಿಂದ ನಮ್ಮ ಕಥಾನಾಯಕ ತನ್ನ ನಿಯಂತ್ರಣ ಕಳೆದುಕೊಳ್ಳುವಾಗ ಉಂಟಾಗುವ ನಿರಾಯಾಸಭಾವನೆಯನ್ನು ನಿಖರವಾಗಿ ಚಿತ್ರಿಸುತ್...