ಭಾರತ, ಮೇ 3 -- ಹೌದು.. 2024ರ ಐಪಿಎಲ್ನಲ್ಲಿ ಆರ್ಸಿಬಿ vs ಸಿಎಸ್ಕೆ ನಡುವಿನ ಕೊನೆಯ ಲೀಗ್ ಪಂದ್ಯದ ದೃಶ್ಯಗಳು ಮತ್ತೊಮ್ಮೆ ಕಣ್ಮುಂದೆ ಹಾದುಹೋದವು. 2025ರ ಐಪಿಎಲ್ನ 52ನೇ ಪಂದ್ಯದಲ್ಲೂ ಥೇಟ್ ಅದೇ ದೃಶ್ಯಗಳು ಸಾಕ್ಷಿಯಾದವು. ಅಂಥಹದ್ದೇ ರೋಚಕ ಗೆಲುವನ್ನು ಅಭಿಮಾನಿಗಳು ಮತ್ತೆ ಕಣ್ತುಂಬಿಕೊಂಡರು. ಜಿದ್ದಾಜಿದ್ದಿನ ಕೊನೆಯ ಓವರ್ನಲ್ಲಿ ಗೆಲುವಿಗೆ 15 ರನ್ ಬೇಕಿದ್ದಾಗ ಯಶ್ ದಯಾಳ್ ಮಾರಕ ಬೌಲಿಂಗ್ ದಾಳಿ ನಡೆಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕನಸಿಗೆ ತಣ್ಣೀರೆರಚಿದರು. 2024ರಂತೆಯೇ ಈ ಬಾರಿಯೂ ಯಶ್ ದಯಾಳ್ ಸಂಭ್ರಮಿಸುವ ಮೂಲಕ ಗಮನ ಸೆಳೆದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಜರುಗಿದ 18ನೇ ಆವೃತ್ತಿಯ ಐಪಿಎಲ್ನ 52ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ರನ್ಗಳ ರೋಚಕ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ 8ನೇ ಗೆಲುವು ಸಾಧಿಸಿದ ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಪ್ಲೇಆಫ್ಗೆ ಮತ್ತಷ್ಟು ಹತ್ತಿರವಾಯಿತು. ಇದು 2024ರಲ್ಲಿ ಸಿಎಸ್ಕೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.