ಭಾರತ, ಮೇ 1 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಂತರ ರಾಜಸ್ಥಾನ್ ರಾಯಲ್ಸ್ ಎರಡನೇ ತಂಡವಾಗಿ ಪ್ಲೇಆಫ್ ರೇಸ್ನಿಂದ ಹೊರ ಬಿದ್ದಿದೆ. ಗುಂಪು ಹಂತದ 50ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 100 ರನ್ಗಳ ಅಂತರದಿಂದ ಮಣಿದ ಆರ್ಆರ್, 2ನೇ ಟ್ರೋಫಿಯ ಕನಸನ್ನು ಕೈಬಿಟ್ಟಿತು. 5 ಬಾರಿಯ ಚಾಂಪಿಯನ್ ಮುಂಬೈ ಭರ್ಜರಿ ಗೆಲುವಿನೊಂದಿಗೆ 14 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಆರ್ಸಿಬಿ ತಂಡವನ್ನು 2ನೇ ಸ್ಥಾನಕ್ಕೆ ತಳ್ಳಿ ಅಗ್ರಸ್ಥಾನಕ್ಕೇರಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಮುಂಬೈ, ಸತತ 6ನೇ ಗೆಲುವು ಕಂಡಿದೆ. ಆರಂಭಿಕ ಐದು ಪಂದ್ಯಗಳಲ್ಲಿ 4ರಲ್ಲಿ ಸೋಲಿನ ರುಚಿ ಅನುಭವಿಸಿದ್ದ ಎಂಐ ಈಗ ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿದೆ. ಜೊತೆಗೆ ಇನ್ನೊಂದು ಜಯದ ನಗೆ ಬೀರಿದರೆ, ಪ್ಲೇಆಫ್ಗೆ ಲಗ್ಗೆ ಹಾಕಲಿದೆ. ಪ್ರಸ್ತುತ 11 ಪಂದ್ಯಗಳಲ್ಲಿ 7 ಗೆಲುವು, 4 ಸೋಲು ಕಂಡಿರುವ ಹಾರ್ದಿಕ್ ಪಡೆ, 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ಕಡೆ ರಿಯಾನ್ ಪರಾಗ್ ಪಡೆ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.