ಭಾರತ, ಮೇ 1 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಂತರ ರಾಜಸ್ಥಾನ್ ರಾಯಲ್ಸ್ ಎರಡನೇ ತಂಡವಾಗಿ ಪ್ಲೇಆಫ್​ ರೇಸ್​ನಿಂದ ಹೊರ ಬಿದ್ದಿದೆ. ಗುಂಪು ಹಂತದ 50ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 100 ರನ್​ಗಳ ಅಂತರದಿಂದ ಮಣಿದ ಆರ್​ಆರ್​, 2ನೇ ಟ್ರೋಫಿಯ ಕನಸನ್ನು ಕೈಬಿಟ್ಟಿತು. 5 ಬಾರಿಯ ಚಾಂಪಿಯನ್ ಮುಂಬೈ ಭರ್ಜರಿ ಗೆಲುವಿನೊಂದಿಗೆ 14 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಆರ್​​ಸಿಬಿ ತಂಡವನ್ನು 2ನೇ ಸ್ಥಾನಕ್ಕೆ ತಳ್ಳಿ ಅಗ್ರಸ್ಥಾನಕ್ಕೇರಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್​​​ ಎರಡರಲ್ಲೂ ಮಿಂಚಿದ ಮುಂಬೈ, ಸತತ 6ನೇ ಗೆಲುವು ಕಂಡಿದೆ. ಆರಂಭಿಕ ಐದು ಪಂದ್ಯಗಳಲ್ಲಿ 4ರಲ್ಲಿ ಸೋಲಿನ ರುಚಿ ಅನುಭವಿಸಿದ್ದ ಎಂಐ ಈಗ ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿದೆ. ಜೊತೆಗೆ ಇನ್ನೊಂದು ಜಯದ ನಗೆ ಬೀರಿದರೆ, ಪ್ಲೇಆಫ್​ಗೆ ಲಗ್ಗೆ ಹಾಕಲಿದೆ. ಪ್ರಸ್ತುತ 11 ಪಂದ್ಯಗಳಲ್ಲಿ 7 ಗೆಲುವು, 4 ಸೋಲು ಕಂಡಿರುವ ಹಾರ್ದಿಕ್ ಪಡೆ, 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ಕಡೆ ರಿಯಾನ್ ಪರಾಗ್ ಪಡೆ ...