ಭಾರತ, ಏಪ್ರಿಲ್ 16 -- ಜೀ ಕನ್ನಡ ವಾಹಿನಿಯು ಸರಿಗಮಪ ಶೋನ ಪ್ರೊಮೊ ಹಂಚಿಕೊಂಡಿದೆ. ಅದರಲ್ಲಿ ಶಿವಣ್ಣ ಡ್ಯಾನ್ಸ್ ಮಾಡುವ, ಹಾಡು ಹಾಡುವ ಝಲಕ್ ತೋರಿಸಲಾಗಿದೆ. ಸರಿಗಮಪ ವೇದಿಕೆಗೆ ಬಂತು ಎನರ್ಜಿಯ ಹಿಮಾಲಯ; ಕರುನಾಡ ಚಕ್ರವರ್ತಿ ಶಿವಣ್ಣ ಅವರ ಗಾನ ವಿಸ್ಮಯ! ಎಂಬ ಶೀರ್ಷಿಕೆಯಡಿ ಹಂಚಿಕೊಂಡ ಪ್ರೊಮೊ ನೋಡಿ ಶಿವರಾಜ್ ಕುಮಾರ್ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಅಮೆರಿಕದಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ವಾಪಸ್ ಬಂದ ಬಳಿಕ ಅಭಿಮಾನಿಗಳು ಶಿವಣ್ಣನ ಎನರ್ಜಿ ತುಂಬಿದ ಪರ್ಫಾಮೆನ್ಸ್ ನೋಡುತ್ತಿದ್ದಾರೆ. ಈ ಖುಷಿಯಲ್ಲಿ "ಶಿವಣ್ಣ ಈಸ್ ಬ್ಯಾಕ್" ಎಂದು ಖುಷಿಪಡುತ್ತಿದ್ದಾರೆ.
ಸರಿಗಮಪ ವೇದಿಕೆಗೆ ಶಿವರಾಜ್ ಕುಮಾರ್ ಮಗಳು ನಿವೇದಿತಾ ಕೂಡ ಆಗಮಿಸಿದ್ದಾರೆ. ಫೈರ್ ಫ್ಲೈ ಸಿನಿಮಾದ ಪ್ರೊಮೊಷನ್ಗಾಗಿ ಇವರು ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ತನ್ನ ಮಗಳಿಗೆ ಪ್ರೀತಿಯ ಹೂಮುತ್ತೊಂದನ್ನು ನೀಡಿದ್ದಾರೆ. ಶಿವರಾಜ್ ಕುಮಾರ್ ಎನರ್ಜಿ ತುಂಬಿ ಹಾಡಿರುವ ದೃಶ್ಯವೂ ಪ್ರೊಮೊದಲ್ಲಿ ಕಾಣಿಸಿದೆ. ಪುಟ್ಟ ಗಾಯಕರ ಧ್ವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.