ಭಾರತ, ಏಪ್ರಿಲ್ 16 -- ಜೀ ಕನ್ನಡ ವಾಹಿನಿಯು ಸರಿಗಮಪ ಶೋನ ಪ್ರೊಮೊ ಹಂಚಿಕೊಂಡಿದೆ. ಅದರಲ್ಲಿ ಶಿವಣ್ಣ ಡ್ಯಾನ್ಸ್‌ ಮಾಡುವ, ಹಾಡು ಹಾಡುವ ಝಲಕ್‌ ತೋರಿಸಲಾಗಿದೆ. ಸರಿಗಮಪ ವೇದಿಕೆಗೆ ಬಂತು ಎನರ್ಜಿಯ ಹಿಮಾಲಯ; ಕರುನಾಡ ಚಕ್ರವರ್ತಿ ಶಿವಣ್ಣ ಅವರ ಗಾನ ವಿಸ್ಮಯ! ಎಂಬ ಶೀರ್ಷಿಕೆಯಡಿ ಹಂಚಿಕೊಂಡ ಪ್ರೊಮೊ‌ ನೋಡಿ ಶಿವರಾಜ್‌ ಕುಮಾರ್‌ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಅಮೆರಿಕದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ವಾಪಸ್‌ ಬಂದ ಬಳಿಕ ಅಭಿಮಾನಿಗಳು ಶಿವಣ್ಣನ ಎನರ್ಜಿ ತುಂಬಿದ ಪರ್ಫಾಮೆನ್ಸ್‌ ನೋಡುತ್ತಿದ್ದಾರೆ. ಈ ಖುಷಿಯಲ್ಲಿ "ಶಿವಣ್ಣ ಈಸ್‌ ಬ್ಯಾಕ್‌" ಎಂದು ಖುಷಿಪಡುತ್ತಿದ್ದಾರೆ.

ಸರಿಗಮಪ ವೇದಿಕೆಗೆ ಶಿವರಾಜ್‌ ಕುಮಾರ್‌ ಮಗಳು ನಿವೇದಿತಾ ಕೂಡ ಆಗಮಿಸಿದ್ದಾರೆ. ಫೈರ್‌ ಫ್ಲೈ ಸಿನಿಮಾದ ಪ್ರೊಮೊಷನ್‌ಗಾಗಿ ಇವರು ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ತನ್ನ ಮಗಳಿಗೆ ಪ್ರೀತಿಯ ಹೂಮುತ್ತೊಂದನ್ನು ನೀಡಿದ್ದಾರೆ. ಶಿವರಾಜ್‌ ಕುಮಾರ್‌ ಎನರ್ಜಿ ತುಂಬಿ ಹಾಡಿರುವ ದೃಶ್ಯವೂ ಪ್ರೊಮೊದಲ್ಲಿ ಕಾಣಿಸಿದೆ. ಪುಟ್ಟ ಗಾಯಕರ ಧ್ವ...