ಭಾರತ, ಮೇ 5 -- 'ಯಾವುದೇ ವಿಷಯವಾಗಲಿ ಕಷ್ಟಪಟ್ಟು ಓದಬಾರದು, ಇಷ್ಟಪಟ್ಟು ಓದಿದ್ರೆ ಖಂಡಿತ ಪರೀಕ್ಷೆ ಎದುರಿಸೋದು, ಸಾಧನೆ ಮಾಡೋದು ಕಷ್ಟವಲ್ಲ' ಎನ್ನುವುದು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ ರೂಪ ಚನ್ನಗೌಡ ಪಾಟೀಲ್ ಅಭಿಪ್ರಾಯ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ದೇವಲಾಪುರದವರಾದ ರೂಪಾ ರೈತನ ಮಗಳು. ಇವರ ತಂದೆ ಚನ್ನಗೌಡ ಪಾಟೀಲ್, ತಾಯಿ ಲತಾ. ಸರ್ಕಾರಿ ಪ್ರೌಢಶಾಲೆ ದೇವಲಾಪುರದಲ್ಲಿ ಓದಿರುವ ರೂಪಾಗೆ 625ಕ್ಕೆ 625 ಅಂಕ ಸಿಗಬಹುದು ನಿರೀಕ್ಷೆ ಮೊದಲೇ ಇತ್ತು. ಅದಕ್ಕೆ ಕಾರಣ ಅವರ ಪರೀಕ್ಷಾ ತಯಾರಿ ಹಾಗೂ ಓದಿನ ಕ್ರಮ. ಎಸ್ಎಸ್ಎಲ್ಸಿ ದಿನಗಳು ಹಾಗೂ ತಮ್ಮ ಓದಿನ ಕ್ರಮದ ಬಗ್ಗೆ ಅವರು ಎಚ್ಟಿ (ಹಿಂದೂಸ್ತಾನ್ ಟೈಮ್ಸ್) ಕನ್ನಡದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
'ನಾನು ಹತ್ತನೇ ತರಗತಿ ಮೊದಲ ದಿನದ ತರಗತಿ ಆರಂಭವಾದಾಗಿನಿಂದಲೂ ಪ್ರತಿದಿನ ತಪ್ಪದೇ 2 ಗಂಟೆ ಹೊತ್ತು ಓದುತ್ತಿದ್ದೆ. ಆಯಾಯ ದಿನ ಮಾಡಿದ ಪಾಠವನ್ನು ನೋಟ್ಸ್ ಮಾಡಿ ಇಟ್ಟುಕೊಳ್ಳುತ್ತಿದ್ದೆ. ರಾತ್ರಿ ಅಥವಾ ಬೆಳಗ್ಗೆ ಬೇಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.