ಭಾರತ, ಮಾರ್ಚ್ 27 -- ಕಳೆದ ಆವೃತ್ತಿಯಂತೆ ಆಕ್ರಮಣಕಾರಿ ಆಟದಿಂದ ಎದುರಾಳಿಗಳನ್ನು ಕಂಗೆಡಿಸುತ್ತಿರುವ ತಂತ್ರವನ್ನು ಸನ್ರೈಸರ್ಸ್ ಹೈದರಾಬಾದ್ ಈ ಋತುವಿನಲ್ಲೂ ಮುಂದುವರೆಸಿದೆ. ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್ಗಳನ್ನು ಚೆಂಡಾಡಿದ್ದ ಹೈದರಾಬಾದ್ ಇಂದು (ಮಾರ್ಚ್ 27) ಲಕ್ನೋ ಸೂಪರ್ ಜೈಂಟ್ಸ್ ಸವಾಲಿಗೆ ಸಜ್ಜಾಗಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಹೈಆಕ್ಟೇನ್ ಪಂದ್ಯ ನಡೆಯಲಿದೆ. ಇದು ಐಪಿಎಲ್ ಲೀಗ್ ಹಂತದ 7ನೇ ಪಂದ್ಯ.
ತನ್ನ ಮೊದಲ ಪಂದ್ಯವನ್ನು ಗೆದ್ದಿರುವ ಸನ್ರೈಸರ್ಸ್, ತನ್ನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಗೆಲುವಿನ ವೇಗ ಮುಂದುವರಿಸುವ ಗುರಿ ಹೊಂದಿದ್ದಾರೆ. ಎದುರಾಳಿ ತಂಡದ ಬೌಲಿಂಗ್ ಅನ್ನು ಮತ್ತೊಮ್ಮೆ ಕೆಡವಿ ಸತತ 2 ಗೆಲುವು ದಾಖಲಿಸುವ ಲೆಕ್ಕಾಚಾರದಲ್ಲಿದೆ. ಏತನ್ಮಧ್ಯೆ, ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ವಲ್ಪ ಅಂತರದಲ್ಲಿ ಸೋಲು ಕಂಡಿದೆ. ಮೊದಲ ಪಂದ್ಯದ ತಪ್ಪುಗಳನ್ನು ಪುನರಾವರ್ತಿಸದಿರಲು ಮತ್ತು ಆತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.