ಭಾರತ, ಮಾರ್ಚ್ 27 -- ಕಳೆದ ಆವೃತ್ತಿಯಂತೆ ಆಕ್ರಮಣಕಾರಿ ಆಟದಿಂದ ಎದುರಾಳಿಗಳನ್ನು ಕಂಗೆಡಿಸುತ್ತಿರುವ ತಂತ್ರವನ್ನು ಸನ್​ರೈಸರ್ಸ್​ ಹೈದರಾಬಾದ್ ಈ ಋತುವಿನಲ್ಲೂ ಮುಂದುವರೆಸಿದೆ. ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್​ಗಳನ್ನು ಚೆಂಡಾಡಿದ್ದ ಹೈದರಾಬಾದ್ ಇಂದು (ಮಾರ್ಚ್ 27) ಲಕ್ನೋ ಸೂಪರ್ ಜೈಂಟ್ಸ್ ಸವಾಲಿಗೆ ಸಜ್ಜಾಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಹೈಆಕ್ಟೇನ್ ಪಂದ್ಯ ನಡೆಯಲಿದೆ. ಇದು ಐಪಿಎಲ್ ಲೀಗ್ ಹಂತದ 7ನೇ ಪಂದ್ಯ.

ತನ್ನ ಮೊದಲ ಪಂದ್ಯವನ್ನು ಗೆದ್ದಿರುವ ಸನ್‌ರೈಸರ್ಸ್, ತನ್ನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಗೆಲುವಿನ ವೇಗ ಮುಂದುವರಿಸುವ ಗುರಿ ಹೊಂದಿದ್ದಾರೆ. ಎದುರಾಳಿ ತಂಡದ ಬೌಲಿಂಗ್ ಅನ್ನು ಮತ್ತೊಮ್ಮೆ ಕೆಡವಿ ಸತತ 2 ಗೆಲುವು ದಾಖಲಿಸುವ ಲೆಕ್ಕಾಚಾರದಲ್ಲಿದೆ. ಏತನ್ಮಧ್ಯೆ, ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ವಲ್ಪ ಅಂತರದಲ್ಲಿ ಸೋಲು ಕಂಡಿದೆ. ಮೊದಲ ಪಂದ್ಯದ ತಪ್ಪುಗಳನ್ನು ಪುನರಾವರ್ತಿಸದಿರಲು ಮತ್ತು ಆತ...