Bengaluru, ಜನವರಿ 31 -- ಹೊಸಪೇಟೆ: ಇತ್ತೀಚಿನ ಕೆಲ ದಿನಗಳಿಂದ ಕನ್ನಡ ಚಿತ್ರೋದ್ಯಮ, ಅರಣ್ಯ ಇಲಾಖೆಯ ಕೆಂಗೆಣ್ಣಿಗೆ ಗುರಿಯಾಗುತ್ತಲೇ ಇದೆ. ಈಗ ಅದಕ್ಕೆ ಹೊಸ ಸೇರ್ಪಡೆ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾ. ಕಲ್ಟ್ ಸಿನಿಮಾ ಶೂಟಿಂಗ್ ವೇಳೆ, ತುಂಗಭದ್ರಾ ನದಿ ತೀರದ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಾಕಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಚಿತ್ರತಂಡಕ್ಕೆ ಸರ್ಕಾರ ಶಾಕ್ ನೀಡಿದ್ದು, ಚಿತ್ರೀಕರಣಕ್ಕೆ ತಡೆ ನೀಡಿದೆ.
ಹಂಪಿಯ ಸಣಾಪುರ, ವಿರುಪಾಪುರ ಗಡ್ಡಿ ಬಳಿಯಲ್ಲಿ ಕಳೆದ ಕೆಲ ದಿನಗಳಿಂದ ಕಲ್ಟ್ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಇದೇ ಚಿತ್ರೀಕರಣದ ಸಲುವಾಗಿ ನದಿ ತೀರದ ಬಳಿ ಬೆಂಕಿ ಹಾಕಲಾಗಿತ್ತು. ಚಿತ್ರತಂಡದ ಈ ನಡೆ ಅಲ್ಲಿನ ಪರಿಸರವಾದಿಗಳ ಕಣ್ಣುಕೆಂಪಗಾಗಿಸಿತ್ತು. ಅರಣ್ಯ ಇಲಾಖೆಯ ಗಮನಕ್ಕೆ ಬಂದ ಬಳಿಕ, ಯಾವುದೇ ಪರವಾನಗಿ ಪಡೆಯದೇ ಶೂಟಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸದ್ಯ ಸರ್ಕಾರದಿಂದಲೇ ಶೂಟಿಂಗ್ಗೆ ತಡೆ ನೀಡಲಾಗಿದೆ.
ಇದನ್ನೂ ಓದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.