ಭಾರತ, ಮಾರ್ಚ್ 18 -- ಐಪಿಎಲ್ ಗೆದ್ದ ಮೊದಲ ತಂಡ ರಾಜಸ್ಥಾನ್ ರಾಯಲ್ಸ್. ಆದರೆ ಅಂದಿನಿಂದ ಯಾವುದೇ ಗಮನಾರ್ಹ ಸಾಧನೆ ಮಾಡಿಲ್ಲ. 2022ರಲ್ಲಿ ಫೈನಲ್ ತಲುಪಿದ್ದೇ 2008ರ ನಂತರದ ದೊಡ್ಡ ಸಾಧನೆಯಾಗಿದೆ. ಅದು ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು. 2023ರಲ್ಲಿ 5ನೇ ಮತ್ತು 2024 ರಲ್ಲಿ 3ನೇ ಸ್ಥಾನಕ್ಕೆ ತೃಪ್ತಿ ಪಡೆದ ಆರ್​ಆರ್​, ಪರಿಷ್ಕೃತ ತಂಡದೊಂದಿಗೆ 2ನೇ ಪ್ರಶಸ್ತಿ ಬೆನ್ನಟ್ಟಲು ಮತ್ತೊಂದು ಐಪಿಎಲ್ ಆವೃತ್ತಿಯನ್ನು ಪ್ರಾರಂಭಿಸಲು ಸಜ್ಜಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡವು ಮಾರ್ಚ್ 23 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತಮ್ಮ ಐಪಿಎಲ್ 2025 ಅಭಿಯಾನವನ್ನು ಪ್ರಾರಂಭಿಸಲಿದೆ.

ಉಳಿದ ತಂಡಗಳಿಂತ ಆರ್​ಆರ್ ಹೊಂದಿರುವ ದೊಡ್ಡ ಪ್ರಯೋಜನ ಏನೆಂದರೆ ಅದು ಸ್ಥಿರ ನಾಯಕ. 2021ರ ಆವೃತ್ತಿಯಿಂದ ಇಲ್ಲಿಯ ತನಕ ಎಲ್ಲಾ ಐಪಿಎಲ್ ತಂಡಗಳ ನಾಯಕತ್ವ ಬದಲಾವಣೆಯಾಗಿದೆ. ಆದರೆ 2025ರಲ್ಲೂ ಅದೇ ಫ್ರಾಂಚೈಸಿಯನ್ನು ಮುನ್ನಡೆಸುತ್ತಿರುವ ಏಕೈಕ ನಾಯಕನಾಗಿದ್ದಾರೆ ಸಂಜು. 2024ರ ಐಪಿಎಲ್​ ನಂತರ ಭಾರತದ ಟಿ20ಐ ಪ್ಲೇಯಿಂಗ್​ XI ನಲ್ಲಿ ಆರ...