ಭಾರತ, ಮೇ 14 -- ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ 'ಸಂಜು ವೆಡ್ಸ್ ಗೀತಾ 2' ಚಿತ್ರವು ಜನವರಿ 17ರಂದು ಬಿಡುಗಡೆಯಾಗಿ, ಅಷ್ಟೇನೂ ಯಶಸ್ವಿಯಾಗದೆ ಮಾಯವಾಗಿತ್ತು. ಚಿತ್ರವನ್ನು ಮತ್ತೊಮ್ಮೆ ಎಡಿಟ್ ಮಾಡಿ, ಹೊಸದಾಗಿ ಬಿಡುಗಡೆ ಮಾಡುವುದಾಗಿ ನಿರ್ದೇಶಕ ನಾಗಶೇಖರ್ ಹೇಳಿದ್ದರು. ಇದೀಗ ಚಿತ್ರವು ಜೂನ್ 06ರರಂದು ಮರುಬಿಡುಗಡೆಯಾಗಿದೆ. ಈ ಬಾರಿ 20 ನಿಮಿಷಗಳ ಹೊಸ ದೃಶ್ಯಗಳನ್ನು ಸೇರಿಸಿ ಬಿಡುಗಡೆ ಮಾಡುವುದಕ್ಕೆ ನಾಗಶೇಖರ್ ಮುಂದಾಗಿದ್ದಾರೆ.
'ಸಂಜು ವೆಡ್ಸ್ ಗೀತಾ 2' ಚಿತ್ರವು ತಾಂತ್ರಿಕವಾಗಿ ಶ್ರೀಮಂತವಾಗಿತ್ತು. ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜನೆಯ ಹಾಡುಗಳು ಮತ್ತು ಸತ್ಯ ಹೆಗಡೆ ಅವರ ಛಾಯಗ್ರಹಣದ ಬಗ್ಗೆ ಮೆಚ್ಚುಗೆಯ ಮಾತು ಕೇಳಿಬಂದಿತ್ತು. ಆದರೆ, ಚಿತ್ರಕಥೆ ಬಹಳ ಸವಕಲಾಗಿದ್ದರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅದರಲ್ಲೂ ರಾಗಿಣಿ ಪಾತ್ರ ಚಿತ್ರದಲ್ಲಿ ಯಾಕೆ ಬರುತ್ತದೆ? ಚಿಕ್ಕಬಳ್ಳಾಪುರದ ರೇಷ್ಮೆ ಬೆಳಗಾರರ ಸಮಸ್ಯೆಗಳೇನು? ಎಂಬ ಪ್ರಶ್ನೆಸಗಳನ್ನು ವಿಮರ್ಶಕರು ಎತ್ತಿದ್ದರು. ಹಾಗೆಯೇ ನಿರೂಪಣೆ ಜಾಳ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.