ಭಾರತ, ಏಪ್ರಿಲ್ 16 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್​ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಟ ನಡೆಸಲಿವೆ. ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಮೊದಲ 2 ಪಂದ್ಯ ಸೋಲು, ನಂತರ ಎರಡು ಪಂದ್ಯ ಗೆಲುವು, ಬಳಿಕ ಎರಡು ಪಂದ್ಯಗಳನ್ನು ಸೋತಿರುವ ರಾಜಸ್ಥಾನ್ ರಾಯಲ್ಸ್ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಇನ್​ಫಾರ್ಮ್​ ಡೆಲ್ಲಿ ವಿರುದ್ಧ ಲಯಕ್ಕೆ ಮರಳಲು ಸಜ್ಜಾಗಿದೆ. ಅಗ್ರ ಕ್ರಮಾಂಕದ ಬಲ ಕಳೆದುಕೊಂಡಿರುವ ಆರ್​ಆರ್​, ಬ್ಯಾಟಿಂಗ್ ಡೆಪ್ತ್​ ಇಲ್ಲದಿರುವುದು ಕೂಡ ಸತತ ಸೋಲುಗಳಿಗೆ ಕಾರಣವಾಗುತ್ತಿದೆ.

ಐಪಿಎಲ್ 2025ರಲ್ಲಿ ಆರ್‌ಆರ್ ಪಂಜಾಬ್ ಕಿಂಗ್ಸ್ ನಂತರ 9.72ರ 2ನೇ ಅತ್ಯುತ್ತಮ ಪವರ್‌ಪ್ಲೇ ರನ್ ರೇಟ್​ ಹೊಂದಿರುವ ಆರ್​ಆರ್​, ಮಧ್ಯಮ ಓವರ್‌ಗಳಲ್ಲಿ ಅದು 7.86ಕ್ಕೆ ಇಳಿಯುತ್ತದೆ. ಇದು ಚೆನ್ನೈ ಸೂಪರ್ ಕಿಂಗ್ಸ್ (CSK) ನಂತರ 2ನೇ ಅತ್ಯಂತ ಕೆಟ್ಟದಾಗಿದೆ. ಈಗ ಡೆಲ್ಲಿ ವಿರುದ್ಧ ಮಧ್ಯಮ ಓವರ್​​ಗಳಲ್ಲಿ ಅಬ್ಬರಿಸುವುದು ತುಂಬಾ ಕಷ್ಟ. ಏಕೆಂದರೆ ಕುಲ್ದ...