ಭಾರತ, ಮಾರ್ಚ್ 26 -- ಇದು ಶ್ರೇಯಸ್ ಅಯ್ಯರ್ ಅವರ 10ನೇ ಐಪಿಎಲ್ ಆವೃತ್ತಿ. ಚೊಚ್ಚಲ ಶತಕ ಸಿಡಿಸುವ ಸುವರ್ಣಾವಕಾಶ ಅವರ ಮುಂದಿತ್ತು. 97 ರನ್ ಗಳಿಸಿದ್ದ ಅಯ್ಯರ್, 3 ರನ್ ಗಳಿಸುವುದು ದೊಡ್ಡ ವಿಷಯವೇನು ಆಗಿರಲಿಲ್ಲ. ಹೀಗಿದ್ದರೂ ತಂಡದ ಹಿತಾಸಕ್ತಿ ನೋಡಿದ ಶ್ರೇಯಸ್ ಗೆಲುವಿನ ದೃಷ್ಟಿಕೋನವನ್ನು ಮುಂದಿಟ್ಟುಕೊಂಡು ತಮ್ಮ ಶತಕ ತ್ಯಾಗ ಮಾಡಿದರು. ಕೊನೆಯ ಓವರ್ನಲ್ಲಿ ಶತಕದ ಬಗ್ಗೆ ತಲೆಕೆಡಿಸಿಕೊಳ್ಳಬೇಡ, ನೀನು ನಿನ್ನ ಆಟ ಆಡು ಎಂದು ಶಶಾಂಕ್ ಸಿಂಗ್ಗೆ 26.75 ಕೋಟಿ ವೀರ ಅಯ್ಯರ್ ಹೇಳಿದ್ದರು. ಅದರಂತೆ ಓವರ್ನಲ್ಲಿ ಶಶಾಂಕ್ 5 ಬೌಂಡರಿ ಸಹಿತ 23 ರನ್ ಬಾರಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಇದೇ ಸ್ಕೋರ್ನಿಂದಾಗಿ ಪಂಜಾಬ್ ಕಿಂಗ್ಸ್ ಗೆಲ್ಲಲು ಸಾಧ್ಯವಾಯಿತು!
ಈ ವಿಚಾರಕ್ಕೆ ಸಂಬಂಧಿಸಿ ಶ್ರೇಯಸ್ ಅಯ್ಯರ್ ನಡೆಯನ್ನು ಶ್ಲಾಘಿಸಿರುವ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ, 2019ರಲ್ಲಿ ನಡೆದಿದ್ದ ಘಟನೆಗೆ ಪರೋಕ್ಷವಾಗಿ ವಿರಾಟ್ ಕೊಹ್ಲಿ ಅವರನ್ನು ಟೀಕಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನ 5ನೇ ಹಾಗೂ ಉಭಯ ತಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.