ಭಾರತ, ಮಾರ್ಚ್ 26 -- ಇದು ಶ್ರೇಯಸ್ ಅಯ್ಯರ್ ಅವರ 10ನೇ ಐಪಿಎಲ್ ಆವೃತ್ತಿ. ಚೊಚ್ಚಲ ಶತಕ ಸಿಡಿಸುವ ಸುವರ್ಣಾವಕಾಶ ಅವರ ಮುಂದಿತ್ತು. 97 ರನ್ ಗಳಿಸಿದ್ದ ಅಯ್ಯರ್​​, 3 ರನ್ ಗಳಿಸುವುದು ದೊಡ್ಡ ವಿಷಯವೇನು ಆಗಿರಲಿಲ್ಲ. ಹೀಗಿದ್ದರೂ ತಂಡದ ಹಿತಾಸಕ್ತಿ ನೋಡಿದ ಶ್ರೇಯಸ್ ಗೆಲುವಿನ ದೃಷ್ಟಿಕೋನವನ್ನು ಮುಂದಿಟ್ಟುಕೊಂಡು ತಮ್ಮ ಶತಕ ತ್ಯಾಗ ಮಾಡಿದರು. ಕೊನೆಯ ಓವರ್​​ನಲ್ಲಿ ಶತಕದ ಬಗ್ಗೆ ತಲೆಕೆಡಿಸಿಕೊಳ್ಳಬೇಡ, ನೀನು ನಿನ್ನ ಆಟ ಆಡು ಎಂದು ಶಶಾಂಕ್​ ಸಿಂಗ್​ಗೆ 26.75 ಕೋಟಿ ವೀರ ಅಯ್ಯರ್​ ಹೇಳಿದ್ದರು. ಅದರಂತೆ ಓವರ್​​ನಲ್ಲಿ ಶಶಾಂಕ್ 5 ಬೌಂಡರಿ ಸಹಿತ 23 ರನ್ ಬಾರಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಇದೇ ಸ್ಕೋರ್​ನಿಂದಾಗಿ ಪಂಜಾಬ್ ಕಿಂಗ್ಸ್​ ಗೆಲ್ಲಲು ಸಾಧ್ಯವಾಯಿತು!

ಈ ವಿಚಾರಕ್ಕೆ ಸಂಬಂಧಿಸಿ ಶ್ರೇಯಸ್ ಅಯ್ಯರ್ ನಡೆಯನ್ನು ಶ್ಲಾಘಿಸಿರುವ ಮಾಜಿ ಹೆಡ್​ ಕೋಚ್ ರವಿ ಶಾಸ್ತ್ರಿ, 2019ರಲ್ಲಿ ನಡೆದಿದ್ದ ಘಟನೆಗೆ ಪರೋಕ್ಷವಾಗಿ ವಿರಾಟ್ ಕೊಹ್ಲಿ ಅವರನ್ನು ಟೀಕಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನ 5ನೇ ಹಾಗೂ ಉಭಯ ತಂ...