Bangalore, ಮಾರ್ಚ್ 8 -- ತಮ್ಮ ನೇರ ನಡೆ ನುಡಿ, ಮುಕ್ತ ಚಿಂತನೆಯ ಮೂಲಕ ಧರ್ಮಗುರುಗಳು ಹೀಗೂ ಇರಬಲ್ಲರಾ, ಸಾಮಾನ್ಯರೊಂದಿಗೂ ಸಂವಾದಿಸಿ ಸ್ಪಂದಿಸಬಲ್ಲರ ಎನ್ನುವ ರೀತಿಯಲ್ಲಿಯೇ ಇದ್ದ ಉಡುಪಿ ಪೇಜಾವರ ಮಠದ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಕಾಲವಾಗಿ ಆರು ವರ್ಷಗಳೇ ಕಳೆದಿವೆ. ಅವರ ಚಿಂತನೆಗಳು, ಬದುಕಿನ ಆಶಯಗಳು ಜನರಲ್ಲಿ ಉಳಿದುಕೊಂಡಿವೆ. ತಮ್ಮ ವಿಚಾರ ಆಚಾರದ ಜತೆಯಲ್ಲಿ ಇತರೊಂದಿಗೆ ಬೆರೆಯುವ ಒಪ್ಪಿ ನಡೆಯುವ ಒಳಗೊಳ್ಳುವಿಕೆ ಮನೋಭಾವದಿಂದಲೇ ಇಷ್ಟವಾಗುತ್ತಿದ್ದ ವಾಮನಮೂರ್ತಿ ಶ್ರೀ ವಿಶ್ವೇಶತೀರ್ಥರು ಚಿರಸ್ಥಾಯಿಯಾಗಬಲ್ಲ ಹಲವು ಕೆಲಸಗಳನ್ನು ಮಾಡಿ ಹೋಗಿದ್ದಾರೆ. ಈಗ ಅವರ ಹೆಸರು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಅವರದ್ದೇ ಹೆಸರಿನಲ್ಲಿ ಆಸ್ಪತ್ರೆಯೊಂದನ್ನು ತೆರೆಯಲಾಗಿದೆ.
ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಶ್ರೀ ಕೃಷ್ಣ ಸೇವಾಶ್ರಮ ಟ್ರಸ್ಟ್ ನಿರ್ಮಿಸಿರುವ ಶ್ರೀ ವಿಶ್ವೇಶ ತೀರ್ಥ ಸ್ಮಾರಕ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. 150 ಹಾಸಿಗೆಗಳನ್ನು ಹೊಂದಿರುವ ವಿಶಾಲ ಆಸ್ಪತ್ರೆಯಿದು. ಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.