ಭಾರತ, ಜನವರಿ 31 -- Economic Survey 2025: ಕೇಂದ್ರ ಬಜೆಟ್ 2025ರ ಮಂಡನೆಗೆ ದಿನ ಮುಂಚಿತವಾಗಿ ಅಂದರೆ ಜನವರಿ 31 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆ 2024-25 ಅನ್ನು ಸಂಸತ್‌ನಲ್ಲಿ ಮಂಡಿಸಿದರು. ಈ ಆರ್ಥಿಕ ಸಮೀಕ್ಷೆಯಲ್ಲಿ ಹಲವು ವಿಚಾರಗಳು ಪ್ರಸ್ತಾಪವಾಗಿವೆ. ಈ ಪೈಕಿ ಕೃಷಿ ಕ್ಷೇತ್ರ ವಿಶೇಷವಾಗಿ ರೈತರ ವಿಚಾರ ಪ್ರಸ್ತಾಪವಾದಾಗ ಶೇ 4 ಬಡ್ಡಿಯಲ್ಲಿ 3 ಲಕ್ಷ ರೂ ತನಕ ಸಾಲಕ್ಕೆ ಮನಸೋತ ರೈತರು ಎಂಬ ಈ ಅಂಶ ಆರ್ಥಿಕ ಸಮೀಕ್ಷೆಯಲ್ಲಿ ಎದ್ದು ಕಾಣಿಸಿತು. ಇದು ಪರಿಷ್ಕೃತ ಬಡ್ಡಿ ಸಹಾಯ ಯೋಜನೆಯ (Modified Interest Subvention Scheme- MISS) ಪರಿಣಾಮವನ್ನು ಬಿಂಬಿಸಿದೆ.

ಆರ್ಥಿಕ ಸಮೀಕ್ಷೆಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಿಂದ ಪರಿಷ್ಕೃತ ಬಡ್ಡಿ ಸಹಾಯ ಯೋಜನೆಗೆ ಸಂಬಂಧಿಸಿದ ಅರ್ಜಿಗಳ ವಿಲೆವಾರಿಯಲ್ಲಿ ತ್ವರಿತಗೊಳಿಸುವುದಕ್ಕೆ ಕಿಸಾನ್‌ ಋಣ ಪೋರ್ಟಲ್‌ (ಕೆಆರ್‌ಪಿ) ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ 2024ರ ಡಿ 31ರ ವೇಳೆಗೆ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಅ...