Bengaluru, ಮೇ 20 -- ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿಗಳ ಆಗಮನ ಆಗುತ್ತಿದ್ದಂತೆ, ಹಳೇ ಧಾರಾವಾಹಿಗಳು ಕೊನೆಗೊಳ್ಳಲೇಬೇಕು. ಕೆಲವೊಮ್ಮೆ ಸಮಯವನ್ನು ಏರಿಳಿತ ಮಾಡಿ, ಹೊಸ ಸೀರಿಯಲ್ಗಳಿಗೆ ಜಾಗ ಮಾಡಿಕೊಡುವ ಕೆಲಸವೂ ನಡೆಯುತ್ತಿದೆ. ಇದೀಗ ಜೀ ಕನ್ನಡದ ಅಂಥದ್ದೇ ಒಂದು ಹೊಸ ಬದಲಾವಣೆಯತ್ತ ಹೊರಳುತ್ತಿದೆ. ಹಳೇ ಧಾರಾವಾಹಿಯೊಂದು ಅಂತ್ಯಕ್ಕೆ ಹತ್ತಿರ ಬಂದರೆ, ಹೊಸ ಸೀರಿಯಲ್ ಪ್ರಸಾರಕ್ಕೆ ಅಣಿಯಾಗುತ್ತಿದೆ. ಹಾಗಾದರೆ, ಕೊನೆಯಾಗುವ ಸೀರಿಯಲ್ ಯಾವುದು? ಶುರುವಾಗುವ ಹೊಸ ಕಥೆ ಯಾವುದು? ಇಲ್ಲಿದೆ ಮಾಹಿತಿ.
ಸದ್ಯ ಜೀ ಕನ್ನಡದಲ್ಲಿ ಎರಡು ಸೀರಿಯಲ್ಗಳು ಪ್ರೋಮೋ ಮೂಲಕವೇ ಗಮನಸೆಳೆದಿವೆ. ಒಂದು ಭಕ್ತಿ ಪ್ರಧಾನ ಕಥೆಯುಳ್ಳ ʻಶ್ರೀ ರಾಘವೇಂದ್ರ ಮಹಾತ್ಮೆʼ ಇನ್ನೊಂದು ʻಕರ್ಣʼ. ʻಅವನು ತ್ಯಾಗಕ್ಕೆ ಇನ್ನೊಂದು ಹೆಸರು, ಕರ್ಣ ಹೆಸರೇ ನಿಧಿಯ ಉಸಿರುʼ ಅನ್ನೋ ಅಡಿಬರಹದ ಮೂಲಕವೇ ಇಡೀ ಸೀರಿಯಲ್ನ ತಾತ್ಪರ್ಯ ಹೇಳುವ ಕಥೆಯಿದು. ಜೀ ಕನ್ನಡದ ಈ ಎರಡು ಧಾರಾವಾಹಿಗಳ ಪ್ರೋಮೋಗಳು ಈಗಾಗಲೇ ಬಿಡುಗಡೆಯಾಗಿ, ಜನಮೆಚ್ಚುಗೆ ಪಡೆದಿವೆ. ಅದ್ಯಾವಾಗ ಶುರು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.