ಭಾರತ, ಮೇ 16 -- ಇತ್ತೀಚೆಗೆ ಶಿಶುಗಳಲ್ಲಿ ವಕ್ರಪಾದ (ಕ್ಲಬ್ಫೂಟ್) ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆಯಿಂದಾಗಿ ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳಲ್ಲೂ ಏರಿಕೆ ಕಾಣಿಸುತ್ತಿದೆ. ಸಾಮಾನ್ಯವಾಗಿ 1000 ಮಕ್ಕಳ ಪೈಕಿ 5 ಮಂದಿಯಲ್ಲಿ ಈ ಸಮಸ್ಯೆ ಕಾಣಿಸುತ್ತದೆ. ತಕ್ಷಣ ಎಚ್ಚೆತ್ತುಕೊಂಡರೆ ಸರಳ, ಸುಲಭ ಮತ್ತು ಸೋವಿ ಅಂದರೆ ಅಗ್ಗದ ದರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಶಿಶುವಿನ ಪಾದಗಳನ್ನು ಸಹಜ ಸ್ಥಿತಿಗೆ ತಂದು, ಅದರ ಬೆಳವಣಿಗೆ ಎಲ್ಲರಂತೆ ಇರುವಂತೆ ನೋಡಿಕೊಳ್ಳಬಹುದು. ಮೊದಲು ವಕ್ರಪಾದ ಎಂದರೇನು ಎಂಬುದನ್ನು ತಿಳಿಯೋಣ.
ಶಿಶುವಿನ ಪಾದ ಒಳಮುಖವಾಗಿ ತಿರುಗಿರುವುದು, ಬೆರಳುಗಳು ತಿರುಚಿಕೊಂಡಿರುವುದು, ಪಾದದ ಕೆಳಭಾಗ ಪಕ್ಕಕ್ಕೆ ಇಲ್ಲವೇ ಮೇಲ್ಮುಖವಾಗಿರುವುದು - ಇದೆಲ್ಲವೂ ವಕ್ರ/ಚೊಟ್ಟು ಪಾದದ ಲಕ್ಷಣಗಳಾಗಿವೆ. ಶೇ 50 ಪ್ರಕರಣಗಳಲ್ಲಿ ಮಾತ್ರ ಎರಡೂ ಪಾದಗಳು ಅಲ್ಪ ವಿರೂಪವಿರುವುದು ಕಾಣುತ್ತೇವೆ.
ಹಾಗಂತ ಮೇಲೆ ಹೇಳಿದ ಎಲ್ಲಾ ಸಮಸ್ಯೆಗಳು ಒಟ್ಟಿಗೆ ಇರುತ್ತವೆ ಎಂದು ಹೇಳಲಾಗದು. ಇದರಲ್ಲಿ ಯಾವುದೋ ಒಂದು ಮುಖ್ಯ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.