ಭಾರತ, ಫೆಬ್ರವರಿ 25 -- ಶಿವರಾತ್ರಿಯ ದಿನ ಸಾಕಷ್ಟು ಭಕ್ತರು ಭಕ್ತಿಯಿಂದ ಶಿವನನ್ನು ಆರಾಧಿಸುತ್ತಾರೆ. ಶಿವನ ಭಜನೆ ಮಾಡುತ್ತಾರೆ. ಉಪವಾಸ ಇರುತ್ತಾರೆ, ರಾತ್ರಿ ಜಾಗರಣೆ ಮಾಡುವ ಹಲವರಿದ್ದಾರೆ. ಹೀಗಿರುವಾಗ ಆ ದಿನವನ್ನು ಇನ್ನಷ್ಟು ಭಕ್ತಿಯಿಂದ ಕಳೆಯಲು ನೀವು ಶಿವನ ಮಹಾತ್ಮೆಯನ್ನು ಸಾರುವ ಸಿನಿಮಾಗಳನ್ನು ನೋಡಬಹುದು. ಶಿವನ ಬಗ್ಗೆ ಪುಸ್ತಕ ಹಾಗೂ ಮಂತ್ರಗಳನ್ನು ಓದುವ ರೀತಿಯಲ್ಲೇ, ಶಿವನ ಮಹಾತ್ಮೆಯನ್ನು ತಿಳಿಸುವ ಸಿನಿಮಾಗಳನ್ನೂ ಸಹ ನೀವು ನೋಡಬಹುದು. ರಾತ್ರಿ ಇಡೀ ಜಾಗರಣೆ ಮಾಡಬೇಕು ಎಂದುಕೊಂಡವರಿಗೆ ಈ ಸಿನಿಮಾಗಳು ಸುಲಭವಾಗಿ ಯುಟ್ಯೂಬ್‌ನಲ್ಲೇ ಲಭ್ಯವಿದೆ.

ಶಿವರಾತ್ರಿ ಮಹಾತ್ಮೆ ಸಿನಿಮಾಬಹಳ ಹಳೆಯ ಕಾಲದ ಸಿನಿಮಾ ಇದು. 'ಶಿವರಾತ್ರಿ ಮಹಾತ್ಮೆ' ಭಕ್ತಿ ಪ್ರಧಾನ ಚಿತ್ರವಾಗಿದ್ದು ಡಾ ರಾಜಕುಮಾರ್ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ನೋಡುತ್ತಿದ್ದರೆ ನಾವೂ ಕೈಲಾಸದಲ್ಲಿಯೇ ಎಲ್ಲೋ ಇದ್ದು ಹತ್ತಿರದಿಂದ ಶಿವನ ಲೀಲೆಗಳನ್ನು ನೋಡುತ್ತಿರುವಂತೆ ಭಾಸವಾಗುವ ಸಿನಿಮಾ ಇದು. ಸಿನಿಮಾದ ಉದ್ದಕ್ಕೂ ಸ...