Bengaluru, ಏಪ್ರಿಲ್ 1 -- Salary Hike vs Inflation: ಬಹುತೇಕ ಕಂಪನಿಗಳಲ್ಲಿ ಈಗ ವಾರ್ಷಿಕ ಕಾರ್ಯಸಾಧನೆಯ ಪರಾಮರ್ಶೆ ನಡೆದು ಉದ್ಯೋಗಿಗಳ ವೇತನ ಹೆಚ್ಚಳಕ್ಕೆ ಸಿದ್ದತೆ ನಡೆದಿರುವ ಸಮಯ. ಇನ್ನು ಕೆಲವು ಕಂಪನಿಗಳಲ್ಲಿ ಏಪ್ರಿಲ್ನಿಂದ ಅನ್ವಯವಾಗುವಂತೆ ವೇತನ ಹೆಚ್ಚಳವಾಗಿರುವ ಘೋಷಣೆ ಆಗಿರುವ ಹೊತ್ತು ಇದು. ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ವೇತನ ಹೆಚ್ಚಳ ಮತ್ತು ಬಾಡಿಗೆ ಏರಿಕೆ ವಿಚಾರ ಹಂಚಿಕೊಂಡಿದ್ದು, ಹಣದುಬ್ಬರ ಪ್ರಮಾಣದ ಕಡೆಗೆ ಗಮನಸೆಳೆಯುವಂತೆ ಮಾಡಿದೆ. ಅಲ್ಲದೆ ವ್ಯಾಪಕ ಚರ್ಚೆಗೂ ಗ್ರಾಸವಾಗಿದೆ.
ಬೆಂಗಳೂರು ಮೂಲದ ಟೆಕ್ಕಿ ರೇ ಎಂಬುವವರು ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಈ ವಿಚಾರ ಹಂಚಿಕೊಂಡಿದ್ದು, ತನ್ನ ಹತಾಶೆಯನ್ನು ಚಿಕ್ಕದಾಗಿ ವಿವರಿಸಿದ್ದಾರೆ. ವೇತನ ಹೆಚ್ಚಳಕ್ಕಿಂತ ಬಾಡಿಗೆ ಏರಿಕೆ ಹೇಗೆ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಕಡೆಗೆ ಎಲ್ಲರ ಗಮನಸೆಳೆದಿದ್ದಾರೆ. ನನಗೆ ವೇತನ ಹೆಚ್ಚಳ ಅಂತ ಆಗಿದ್ದು ಶೇಕಡ 7.5 ಮಾತ್ರ. ಅದರೆ ಮನೆ ಮಾಲೀಕರು ಶೇಕಡ 10 ಬಾಡಿಗೆ ಏರಿಕೆ ಮಾಡಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.