Bengaluru, ಮೇ 2 -- ಒಟಿಟಿಯಲ್ಲಿ ಕನ್ನಡ ಸಿನಿಮಾಗಳ ಆಗಮನವೇ ತುಂಬ ವಿರಳ. ಸ್ಟಾರ್ ನಟರ ಸಿನಿಮಾಗಳು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಕೆಲವೇ ಕೆಲವು ಸಿನಿಮಾಗಳು ಮಾತ್ರ ಒಟಿಟಿಗೆ ಆಗಮಿಸುತ್ತವೆ. ಅದೂ ತಿಂಗಳುಗಟ್ಟಲೆ ಕಾದ ಬಳಿಕ. ಇದೀಗ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ವಿಮರ್ಶೆ ದೃಷ್ಟಿಯಿಂದಲೂ ಹೌದೌದು ಎನಿಸಿಕೊಂಡಿದ್ದ ಚಿತ್ರವೀಗ ಒಟಿಟಿಗೆ ಆಗಮಿಸಿದೆ. ಆ ಸಿನಿಮಾ ಬೇರಾವುದೂ ಅಲ್ಲ, ʻಕೆರೆಬೇಟೆʼ.
ಕಳೆದ ವರ್ಷದ ಮಾರ್ಚ್ 15ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದ್ದ ಗೌರಿಶಂಕರ್ ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಣವನ್ನೂ ಮಾಡಿದ್ದ ʻಕೆರೆಬೇಟೆʼ ಇದೀಗ ವರ್ಷದ ಬಳಿಕ ಒಟಿಟಿಗೆ ಆಗಮಿಸಿದೆ. ಮಲೆನಾಡ ಭಾಗದ ಕಥೆಯನ್ನೊಳಗೊಂಡ ಕೆರೆಬೇಟೆ ಸಿನಿಮಾವನ್ನು ರಾಜ್ಗುರು ನಿರ್ದೇಶನ ಮಾಡಿದ್ದರು. ಶಿವಮೊಗ್ಗ, ಚಿಕ್ಕಮಗಳೂರು ಸುತ್ತಮುತ್ತ ಶೂಟಿಂಗ್ ಮಾಡಿಕೊಂಡಿದ್ದ ಈ ಸಿನಿಮಾ, ಮಲೆನಾಡಿನ ಮೀನು ಬೇಟೆಯ ಸಂಪ್ರದಾಯವನ್ನು ಪ್ರೇಕ್ಷಕರ ಮುಂದಿಟ್ಟಿತ್ತು.
ಇದನ್ನೂ ಓದಿ: ಹಸಿರ ನಡುವೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.