ಭಾರತ, ಫೆಬ್ರವರಿ 23 -- ನವೀ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ 2025ರ ಇಂಟರ್​ನ್ಯಾಷನಲ್ ಮಾಸ್ಟರ್ಸ್ ಲೀಗ್ (IML) ನಲ್ಲಿ ಇಂಡಿಯಾ ಮಾಸ್ಟರ್ಸ್ ಮತ್ತು ಶ್ರೀಲಂಕಾ ಮಾಸ್ಟರ್ಸ್ ನಡುವಿನ ಪಂದ್ಯದಲ್ಲಿ ಭಾರತದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ತನ್ನ 43 ನೇ ವಯಸ್ಸಿನಲ್ಲಿ ಚಿರತೆಯಂತೆ ಹಾರಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಫೀಲ್ಡಿಂಗ್​ನಲ್ಲಿ ನಿಮ್ಮನ್ನು ಮಿರಿಸೋರಿಲ್ಲ ಅಂತಿದ್ದಾರೆ.

ಇರ್ಫಾನ್ ಪಠಾಣ್ ಎಸೆದ ಪಂದ್ಯದ 8ನೇ ಓವರ್​​ನಲ್ಲಿ ಲಹಿರು ತಿರಿಮನ್ನೆ ಅವರು ಲೆಂಗ್ತ್ ಬಾಲ್ ಅನ್ನು ಸಿಕ್ಸರ್​ ಬಾರಿಸಲು ಪ್ರಯತ್ನಿಸಿದರು. ಆದರೆ ಇನ್ನೇನು ಚೆಂಡು ಬೌಂಡರಿ ಗೆರೆ ದಾಟಿ ಸಿಕ್ಸರ್ ಹೋಗುತ್ತದೆ ಎನ್ನುವಷ್ಟರಲ್ಲಿ ಯುವಿ ಲಾಂಗ್-ಆನ್​ನಲ್ಲಿ ವಯಸ್ಸನ್ನು ಮೀರಿ ಜಿಗಿದು ಸಖತ್ ಕ್ಯಾಚ್ ಹಿಡಿದರು. ಪಂದ್ಯ ಕಣ್ತುಂಬಿಕೊಂಡ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್​ ಅವರು ಸ್ಟನ್ನಿಂಗ್ ಕ್ಯ...