ಭಾರತ, ಫೆಬ್ರವರಿ 23 -- ಸೀರೆ ಆಗಲಿ ಅಥವಾ ಲೆಹೆಂಗಾವಾಗಲಿ ಎಷ್ಟೇ ದುಬಾರಿಯಾದ್ದಾದ್ರೂ ಬ್ಲೌಸ್ ಡಿಸೈನ್ ಚೆನ್ನಾಗಿ ಮಾಡಿಸಿಲ್ಲ ಅಂದ್ರೆ ಅದರ ಕಳೆ ಹೊರಟು ಹೋಗುತ್ತೆ. ಇತ್ತೀಚಿನ ಟ್ರೆಂಡ್ ಜೊತೆಗೆ ಕ್ಲಾಸಿ ಲುಕ್ ನೀಡುವ ಒಂದಿಷ್ಟು ಬ್ಲೌಸ್ ಡಿಸೈನ್‌ಗಳು ಇಲ್ಲಿವೆ. ಈ ಪ್ಯಾಟರ್ನ್‌ಗಳು ಖಂಡಿತ ನಿಮಗೆ ಇಷ್ಟವಾಗುತ್ತೆ, ಮುಂದಿನ ಸಲ ಬ್ಲೌಸ್ ಡಿಸೈನ್ ಮಾಡಿಸುತ್ತಿದ್ದರೆ ಇವನ್ನು ನೀವು ಖಂಡಿತ ಪರಿಗಣಿಸುತ್ತೀರಿ.

ಲೆಹೆಂಗಾಕ್ಕೆ ಹೊಂದುವ ಬ್ಯಾಕ್‌ಲೆಸ್ ಬ್ಲೌಸ್ ಡಿಸೈನ್‌ನೀವು ಲೆಹೆಂಗಾವನ್ನು ಹೊಲಿಸಲು ನಿರ್ಧಾರ ಮಾಡಿದ್ದರೆ ಈ ಬ್ಯಾಕ್‌ಲೆಸ್‌ ಡಿಸೈನ್ ಖಂಡಿತ ನಿಮಗೆ ಇಷ್ಟವಾಗುತ್ತೆ, ಇದು ಟ್ರೆಂಡಿ ಆಗಿಯೂ ಕಾಣಿಸುತ್ತದೆ. ಇದನ್ನು ಧರಿಸಿದಾಗ ನಿಮ್ಮ ನೋಟವೇ ಬದಲಾಗುವುದು ಸುಳ್ಳಲ್ಲ. ಕ್ಲಾಸಿ ಲುಕ್ ನೀಡುವ ಈ ಬ್ಲೌಸ್ ಡಿಸೈನ್‌ ಮದುವೆ ರಿಸೆಪ್ಷನ್‌ನಂತಹ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದ್ದು.

ಡಬಲ್ ಡೋರಿ ಬ್ಲೌಸ್ ವಿನ್ಯಾಸಡೋರಿ ವಿನ್ಯಾಸದ ಬ್ಲೌಸ್‌ಗಳು ತುಂಬಾ ಚೆನ್ನಾಗಿ ಕಾಣುತ್ತವೆ. ಕ್ಲಾಸಿ ಲುಕ್‌ಗಾಗಿ ನೀವು ಡಬಲ್ ಡೋರಿ ವಿನ್...