ಭಾರತ, ಏಪ್ರಿಲ್ 23 -- ಲಾಫಿಂಗ್ ಬುದ್ಧ ಒಟಿಟಿ: ರಿಷಬ್ ಶೆಟ್ಟಿ ನಿರ್ಮಾಣದ ಲಾಫಿಂಗ್ ಬುದ್ಧ ಸಿನಿಮಾಕ್ಕೆ ಇನ್ನೊಂದು ಒಟಿಟಿ ವೇದಿಕೆ ದೊರಕಿದೆ. ಭರತ್ ರಾಜ್ ನಿರ್ದೇಶನದ ಈ ಸಿನಿಮಾವು 2024ರ ಆಗಸ್ಟ್ ತಿಂಗಳಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಹೀರೋ ಆಗಿ ನಟಿಸಿದ್ದಾರೆ. ನಾನ್ ಎಕ್ಸ್ಕ್ಲೂಸಿವ್ ಡೀಲ್ ಮೂಲಕ ಈ ಸಿನಿಮಾಕ್ಕೆ ಈಗ ಎರಡನೇ ಒಟಿಟಿ ದೊರಕಿದೆ.
ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಲಾಫಿಂಗ್ ಬುದ್ಧ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ರಿಷಬ್ ಶೆಟ್ಟಿ ಸ್ನೇಹಿತ ಪ್ರಮೋದ್ ಶೆಟ್ಟಿ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಸೋಮಾರಿ ಡೊಳ್ಳು ಹೊಟ್ಟೆಯ ಪೊಲೀಸ್ ಪಾತ್ರದಲ್ಲಿ ಇವರು ನಟಿಸಿದ್ದರು. ಅಕ್ಟೋಬರ್ 18ರಂದು ಇದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿತ್ತು. ಇದೀಗ ಸನ್ ನೆಟ್ವರ್ಕ್ ಲಾಫಿಂಗ್ ಬುದ್ಧವನ್ನು ತನ್ನ ಒಟಿಟಿಯಲ್ಲಿ ರಿಲೀಸ್ ಮಾಡುವುದಾಗಿ ತಿಳಿಸಿದೆ. ಶೀಘ್ರದಲ್ಲಿ ಈ ಸಿನಿಮಾ ಸನ್ನೆಕ್ಸ್ಟ್ನಲ್ಲಿ ರಿಲೀಸ್ ಆಗಲಿದೆ.
ಏಪ್ರಿಲ್ 25, ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.