ಭಾರತ, ಏಪ್ರಿಲ್ 23 -- ಲಾಫಿಂಗ್‌ ಬುದ್ಧ ಒಟಿಟಿ: ರಿಷಬ್‌ ಶೆಟ್ಟಿ ನಿರ್ಮಾಣದ ಲಾಫಿಂಗ್‌ ಬುದ್ಧ ಸಿನಿಮಾಕ್ಕೆ ಇನ್ನೊಂದು ಒಟಿಟಿ ವೇದಿಕೆ ದೊರಕಿದೆ. ಭರತ್‌ ರಾಜ್‌ ನಿರ್ದೇಶನದ ಈ ಸಿನಿಮಾವು 2024ರ ಆಗಸ್ಟ್‌ ತಿಂಗಳಲ್ಲಿ ರಿಲೀಸ್‌ ಆಗಿತ್ತು. ಈ ಸಿನಿಮಾದಲ್ಲಿ ಪ್ರಮೋದ್‌ ಶೆಟ್ಟಿ ಹೀರೋ ಆಗಿ ನಟಿಸಿದ್ದಾರೆ. ನಾನ್‌ ಎಕ್ಸ್‌ಕ್ಲೂಸಿವ್‌ ಡೀಲ್‌ ಮೂಲಕ ಈ ಸಿನಿಮಾಕ್ಕೆ ಈಗ ಎರಡನೇ ಒಟಿಟಿ ದೊರಕಿದೆ.

ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಲಾಫಿಂಗ್‌ ಬುದ್ಧ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ರಿಷಬ್‌ ಶೆಟ್ಟಿ ಸ್ನೇಹಿತ ಪ್ರಮೋದ್‌ ಶೆಟ್ಟಿ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಸೋಮಾರಿ ಡೊಳ್ಳು ಹೊಟ್ಟೆಯ ಪೊಲೀಸ್‌ ಪಾತ್ರದಲ್ಲಿ ಇವರು ನಟಿಸಿದ್ದರು. ಅಕ್ಟೋಬರ್‌ 18ರಂದು ಇದು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ರಿಲೀಸ್‌ ಆಗಿತ್ತು. ಇದೀಗ ಸನ್‌ ನೆಟ್‌ವರ್ಕ್‌ ಲಾಫಿಂಗ್‌ ಬುದ್ಧವನ್ನು ತನ್ನ ಒಟಿಟಿಯಲ್ಲಿ ರಿಲೀಸ್‌ ಮಾಡುವುದಾಗಿ ತಿಳಿಸಿದೆ. ಶೀಘ್ರದಲ್ಲಿ ಈ ಸಿನಿಮಾ ಸನ್‌ನೆಕ್ಸ್ಟ್‌ನಲ್ಲಿ ರಿಲೀಸ್‌ ಆಗಲಿದೆ.

ಏಪ್ರಿಲ್‌ 25, ...