ಭಾರತ, ಏಪ್ರಿಲ್ 5 -- ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತಿಮ ಹಂತದಲ್ಲಿದೆ. ಗುರುವಾರ ಪ್ರಸಾರವಾದ 600ನೇ ಸಂಚಿಕೆಯ ಕಥೆ ಇಲ್ಲಿದೆ. ಚಿಂಗಾರಿ ಬಂಧನದಿಂದ ತಪ್ಪಿಸಿಕೊಂಡು ಬರುವ ಲಕ್ಷ್ಮೀ, ಒಂದು ತಳ್ಳುಗಾಡಿಯಲ್ಲಿ ಕೀರ್ತಿಯನ್ನು ಮಲಗಿಸಿಕೊಂಡು ಆಸ್ಪತ್ರೆಗಾಗಿ ಹುಡುಕುತ್ತಾಳೆ. ಆದರೆ ಆ ಸ್ಥಳದಿಂದ ಆಸ್ಪತ್ರೆ ಬಹಳ ದೂರ ಇದೆ ಎಂದು ತಿಳಿದ ಅವಳು, ಕೀರ್ತಿಯನ್ನು ದೇವಸ್ಥಾನವೊಂದರ ಬಳಿ ಕರೆತರುತ್ತಾಳೆ. ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಕೀರ್ತಿಯನ್ನು ಉಳಿಸಿಕೊಡು ಎಂದು ದೇವಿ ಬಳಿ ಲಕ್ಷ್ಮೀ ಪ್ರಾರ್ಥಿಸುತ್ತಾಳೆ.
ಅರ್ಚಕರ ಸಲಹೆಯಂತೆ ಲಕ್ಷ್ಮೀ ಕೆಂಪು ಸೀರೆಯುಟ್ಟು ದೇವಿಯ ಸೇವೆ ಮಾಡುತ್ತಾಳೆ. ಕೀರ್ತಿಗೂ ಸೀರೆ ಉಡಿಸುತ್ತಾಳೆ. ದೇವಿಯನ್ನು ಪ್ರಾರ್ಥಿಸುತ್ತಾ ಆಕೆಯ ಮುಂದೆ ನೃತ್ಯ ಮಾಡುತ್ತಾಳೆ. ಅಷ್ಟರಲ್ಲಿ ಕೀರ್ತಿಗೆ ಹಳೆಯ ನೆನಪುಗಳು ಮರುಕಳಿಸುತ್ತದೆ. ತಾನು ಹಾಗೂ ವೈಷ್ಣವ್ ಪ್ರೀತಿಸಿದ್ದು, ವೈಷ್ಣವ್ ಜಾತಕದಲ್ಲಿ ಸಮಸ್ಯೆ ಇದೆ ಅ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.