ಭಾರತ, ಏಪ್ರಿಲ್ 4 -- ಇಂಡಿಯನ್ ಪ್ರೀಮಿಯರ್ ಲೀಗ್ 2025 ಗುಂಪು ಹಂತದ 16ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ರಿಷಭ್ ಪಂತ್ ನೇತೃತ್ವದ ಎಲ್ಎಸ್ಜಿ ಆಡಿರುವ ಮೂರು ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವ ಎಂಐ ತಂಡದ್ದೂ ಇದೇ ಫಲಿತಾಂಶ. ಆದರೆ ಸತತ ಎರಡು ಸೋಲಿನ ನಂತರ ಗೆಲುವಿನ ಹಳಿಗೆ ಮರಳಿರುವ ಮುಂಬೈ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ ಲಕ್ನೋ ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್ರನ್ನಷ್ಟೇ ನೆಚ್ಚಿಕೊಂಡಿದೆ.
ಇಂದು (ಏಪ್ರಿಲ್ 4) ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಅಭಿಮಾನಿಗಳು ಮತ್ತೊಂದು ಹೈವೋಲ್ಟೇಜ್ ಕದನವನ್ನು ನಿರೀಕ್ಷಿಸಬಹುದಾಗಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಮುಂಬೈ ಮತ್ತು ಲಕ್ನೋ ತಂಡಗಳು ಕ್ರಮವಾಗಿ 6 ಮತ್ತು 7ನೇ ಸ್ಥಾನ ಪಡೆದಿವೆ. ಇತ್ತಂಡಗಳ ಪರವೂ ಬ್ಯಾಟಿಂಗ್ ಬಲ ಅದ್ಭುತವಾಗಿದ್ದರೂ ನೀರಸ ಪ್ರದರ್ಶನ ನೀಡುತ್ತಿರುವುದು ಹಿನ್ನಡೆಗೆ ಕಾರಣವಾಗುತ್ತಿದೆ. ಘಟಾನುಘಟಿಗಳೇ ಬಂದಷ್ಟೇ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.