ಭಾರತ, ಏಪ್ರಿಲ್ 4 -- ಇಂಡಿಯನ್ ಪ್ರೀಮಿಯರ್ ಲೀಗ್​ 2025 ಗುಂಪು ಹಂತದ 16ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ರಿಷಭ್ ಪಂತ್ ನೇತೃತ್ವದ ಎಲ್​ಎಸ್​ಜಿ ಆಡಿರುವ ಮೂರು ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವ ಎಂಐ ತಂಡದ್ದೂ ಇದೇ ಫಲಿತಾಂಶ. ಆದರೆ ಸತತ ಎರಡು ಸೋಲಿನ ನಂತರ ಗೆಲುವಿನ ಹಳಿಗೆ ಮರಳಿರುವ ಮುಂಬೈ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ ಲಕ್ನೋ ಮಿಚೆಲ್ ಮಾರ್ಷ್​, ನಿಕೋಲಸ್ ಪೂರನ್​ರನ್ನಷ್ಟೇ ನೆಚ್ಚಿಕೊಂಡಿದೆ.

ಇಂದು (ಏಪ್ರಿಲ್ 4) ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಅಭಿಮಾನಿಗಳು ಮತ್ತೊಂದು ಹೈವೋಲ್ಟೇಜ್ ಕದನವನ್ನು ನಿರೀಕ್ಷಿಸಬಹುದಾಗಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಮುಂಬೈ ಮತ್ತು ಲಕ್ನೋ ತಂಡಗಳು ಕ್ರಮವಾಗಿ 6 ಮತ್ತು 7ನೇ ಸ್ಥಾನ ಪಡೆದಿವೆ. ಇತ್ತಂಡಗಳ ಪರವೂ ಬ್ಯಾಟಿಂಗ್ ಬಲ ಅದ್ಭುತವಾಗಿದ್ದರೂ ನೀರಸ ಪ್ರದರ್ಶನ ನೀಡುತ್ತಿರುವುದು ಹಿನ್ನಡೆಗೆ ಕಾರಣವಾಗುತ್ತಿದೆ. ಘಟಾನುಘಟಿಗಳೇ ಬಂದಷ್ಟೇ ...