ಭಾರತ, ಮೇ 26 -- ರೆಟ್ರೋ ಸಿನಿಮಾ ಒಟಿಟಿ ಬಿಡುಗಡೆ: ಸೂರ್ಯ ಮತ್ತು ಪೂಜಾ ಹೆಗ್ಡೆ ನಟನೆಯ ಬಾಕ್ಸ್‌ ಆಫೀಸ್‌ನಲ್ಲಿ 70.97 ಕೋಟಿ ರೂಪಾಯಿ ಗಳಿಸಿದ ರೆಟ್ರೋ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ, ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷೆ ಮಾಡಿದ್ದಷ್ಟು ಗಳಿಕೆ ಮಾಡಿರಲಿಲ್ಲ. ಆ ಸಮಯದಲ್ಲಿ ರೈಡ್‌ 2 ಮತ್ತು ಹಿಟ್‌ ದಿ ಥರ್ಡ್‌ ಕೇಸ್‌ ಬಿಡುಗಡೆಯಾಗಿತ್ತು. ಇದೀಗ ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಒಂದು ತಿಂಗಳು ಆಗುವ ಮೊದಲೇ ಒಟಿಟಿಯತ್ತ ಮುಖ ಮಾಡುತ್ತಿದೆ. ಸೂರ್ಯ ಮತ್ತು ಪೂಜಾ ಹೆಗ್ಡೆ ನಟನೆಯ ಈ ಸಿನಿಮಾ ಭಾರತದ ಬಾಕ್ಸ್‌ ಆಫೀಸ್‌ನಲ್ಲಿ 70.97 ಕೋಟಿ ರೂಪಾಯಿ ಗಳಿಸಿತ್ತು. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 96.97 ಕೋಟಿ ರೂಪಾಯಿ ಗಳಿಸಿತ್ತು.

ಸೂರ್ಯ ನಟನೆಯ ರೆಟ್ರೋ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಮೇ 31ರಂದು ಸ್ಟ್ರೀಮಿಂಗ್‌ ಆಗಲಿದೆಯಂತೆ. ಈ ಕುರಿತು ನೆಟ್‌ಫ್ಲಿಕ್ಸ್‌ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೆ, ನೆಟ್‌ಫ್ಲಿಕ್ಸ್‌ ತನ್ನ ನ್ಯೂ ಆಂಡ್‌ ಹಾಟ್‌ ಕಮ್ಮಿಂಗ್‌ ಸೂನ್‌ ಸಿನಿಮಾಗಳ ಲಿಸ್ಟ್‌ನ...